ಧಾರವಾಡ:ಇಲ್ಲಿನ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ನ ಮಹಿಳಾ ಸಂಶೋಧನಾ ವಿಜ್ಞಾನಿ, ಲ್ಯಾಬ್ ತಂತ್ರಜ್ಞನ ವಿರುದ್ಧ ದೌರ್ಜನ್ಯ ಆರೋಪದಡಿಯಲ್ಲಿ ದೂರು ದಾಖಲಿಸಿದ್ದಾರೆ.
ಕೋವಿಡ್-19 ಟೆಸ್ಟ್ಲ್ಯಾಬ್ನಲ್ಲಿ ಮಹಿಳೆ ಮೇಲೆ ದೌರ್ಜನ್ಯ ಆರೋಪ: ಪ್ರಾಥಮಿಕ ತನಿಖೆ ಆರಂಭಿಸಿದ ಡಿಮ್ಹಾನ್ಸ್
ಮಹಿಳಾ ಸಂಶೋಧನಾ ವಿಜ್ಞಾನಿ ಈ ಸಂಬಂಧ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಹಾಗೂ ಡಿಮ್ಹಾನ್ಸ್ ಡೈರೆಕ್ಟರ್‌ಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಡಿಮ್ಹಾನ್ಸ್ ಡೈರಕ್ಟರ್ ಸಮಿತಿಯೊಂದನ್ನು ಸಹ ರಚನೆ ಮಾಡಿದ್ದಾರೆ.
ಧಾರವಾಡ ಡಿಮ್ಹಾನ್ಸ್‌ನಲ್ಲಿ ಇತ್ತೀಚೆಗಷ್ಟೇ ಈ ಕೋವಿಡ್-19 ಲ್ಯಾಬ್ ಆರಂಭವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಅನ್ವಯಿಕ ತಳಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಈ ಲ್ಯಾಬ್‌ಗೆ ತಂತ್ರಜ್ಞರನ್ನಾಗಿ ನಿಯೋಜಿಸಲಾಗಿದೆ. ಅವರ ಮೇಲೆಯೇ ಈಗ ದೂರು ಕೇಳಿ ಬಂದಿದೆ.
ಇಲ್ಲಿರುವ ಮಹಿಳಾ ಸಂಶೋಧನಾ ವಿಜ್ಞಾನಿ ಈ ಸಂಬಂಧ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಹಾಗೂ ಡಿಮ್ಹಾನ್ಸ್ ಡೈರೆಕ್ಟರ್‌ಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಡಿಮ್ಹಾನ್ಸ್ ಡೈರಕ್ಟರ್ ಸಮಿತಿಯೊಂದನ್ನು ಸಹ ರಚನೆ ಮಾಡಿದ್ದಾರೆ. ಪ್ರಾಥಮಿಕ ಹಂತದ ವಿಚಾರಣೆಯನ್ನು ಕೈಗೊಂಡಿರುವ ಈ ಕಮೀಟಿ ತನ್ನ ವರದಿಯನ್ನು ಡಿಮ್ಹಾನ್ಸ್, ಕರ್ನಾಟಕ ವಿವಿ ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಲಿದ್ದಾರೆ.