ಕರ್ನಾಟಕ

karnataka

ETV Bharat / state

ಕೊರೊನಾದಿಂದ ಯಲ್ಲಮ್ಮ ಜಾತ್ರೆ ರದ್ದಾದರೂ, ಭಕ್ತರಿಂದ ಭಕ್ತಿ ಸಮರ್ಪಣೆ - Yallamma Fair cancel due to covid

ಭಾರತ ಹುಣ್ಣಿಮೆಯಲ್ಲಿ ಜರುಗುವ ಸವದತ್ತಿ ಯಲ್ಲಮ್ಮನ‌ ಜಾತ್ರೆ ರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಭಕ್ತರು ಕರೆಮ್ಮ ದೇವಿ ದೇವಸ್ಥಾನದಲ್ಲಿ ಎರಡು ದಿನ ಇದ್ದುಕೊಂಡು ಅಲ್ಲಿಯೇ ಅಡುಗೆ ಮಾಡಿ ಹಡ್ಡಲಗಿ ತುಂಬಿಸಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.

Saundatti yellamma temple
ಸವದತ್ತಿ ಯಲ್ಲಮ್ಮನ‌ ಜಾತ್ರೆ

By

Published : Mar 10, 2021, 11:37 AM IST

ಧಾರವಾಡ:ಭಾರತ ಹುಣ್ಣಿಮೆಯಲ್ಲಿ ಜರಗುವ ಸವದತ್ತಿ ಯಲ್ಲಮ್ಮನ‌ ಜಾತ್ರೆ ಕೊರೊನಾ ಕಾರಣದಿಂದ ರದ್ದಾಗಿದೆ. ಆದ್ರೆ ಭಕ್ತರು ತಾವಿದ್ದ ಸ್ಥಳದಿಂದಲೇ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಧಾರವಾಡ ತಾಲೂಕಿನ ಮನಸೂರ ಗ್ರಾಮದ ಕರೆಮ್ಮ ದೇವಿ ದೇವಸ್ಥಾನದಲ್ಲಿ ಎರಡು ದಿನ ಇದ್ದುಕೊಂಡು ಅಲ್ಲಿಯೇ ಅಡುಗೆ ಮಾಡಿ ಹಡ್ಡಲಗಿ ತುಂಬಿಸಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಟ್ರ್ಯಾಕ್ಟರ್ ಹಾಗೂ ಚಕ್ಕಡಿ ಮೂಲಕ ಯಲ್ಲಮ್ಮನ ದೇವಸ್ಥಾ‌ನಕ್ಕೆ ಹೋಗಿ ಜಾತ್ರೆ ಮಾಡುತ್ತಿದ್ದ ಜನರು ಇದೀಗ ತಾವಿದ್ದ ಗ್ರಾಮದಲ್ಲಿಯೇ ಜಾತ್ರೆ ಮಾಡಿದ್ದಾರೆ.

ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದ ಕಾರಣ ಸವದತ್ತಿ ಯಲ್ಲಮ್ಮನ ಜಾತ್ರೆ ಸ್ಥಗಿತಗೊಳಿಸಲಾಗಿದೆ. ಶ್ರೀ ಯಲ್ಲಮ್ಮ ದೇವಸ್ಥಾನದ ನಿಯಮದಂತೆ ತಮ್ಮ ಗ್ರಾಮದಲ್ಲಿ ಯಲ್ಲಮ್ಮನ ಪೂಜೆ ಸಲ್ಲಿಸಿ ಕೋವಿಡ್ ನಿಯಮ ಪಾಲಿಸಿದ್ದಾರೆ.

ABOUT THE AUTHOR

...view details