ಕರ್ನಾಟಕ

karnataka

ETV Bharat / state

ಸ್ವದೇಶದ ಬಗ್ಗೆ ಗೌರವ ಮನೋಭಾವನೆ ಬೆಳೆಸಿಕೊಳ್ಳಿ: ಕಶ್ಮೀರಿಲಾಲ್​ - ಹುಬ್ವಳ್ಳಿಯಲ್ಲಿ ನಡೆದ ಆರ್​ಎಸ್ಎಸ್​ ಕಾರ್ಯಕ್ರಮ

ದೇಶದ ಬಗ್ಗೆ ಪ್ರತಿಯೊಬ್ಬ ಭಾರತೀಯರಲ್ಲಿಯೂ ಗೌರವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್ ರಾಷ್ಟ್ರೀಯ ಸಂಘಟಕ ಕಶ್ಮೀರಿಲಾಲ್ ಹೇಳಿದರು.

rss leader Kashmirilal
ಆರ್​ಎಸ್​ಎಸ್ ರಾಷ್ಟ್ರೀಯ ಸಂಘಟಕ ಕಶ್ಮೀರಿಲಾಲ್

By

Published : Jan 3, 2020, 5:54 PM IST

Updated : Jan 3, 2020, 6:02 PM IST

ಹುಬ್ಬಳ್ಳಿ:ಸ್ವದೇಶದ ಬಗ್ಗೆ ಪ್ರತಿಯೊಬ್ಬ ಭಾರತೀಯರಲ್ಲಿಯೂ ಗೌರವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಭಾರತ ಪುರಾತನ ಇತಿಹಾಸ ಹೊಂದಿದ್ದು, ದೇಶ ಒಡೆಯುವ ಬಗ್ಗೆ ಯಾರು ಆಲೋಚಿಸಬಾರದು ಎಂದು ಆರ್​ಎಸ್​ಎಸ್ ರಾಷ್ಟ್ರೀಯ ಸಂಘಟಕ ಕಶ್ಮೀರಿಲಾಲ್ ಹೇಳಿದರು.

ಆರ್​ಎಸ್​ಎಸ್ ರಾಷ್ಟ್ರೀಯ ಸಂಘಟಕ ಕಶ್ಮೀರಿಲಾಲ್

ನಗರದ ಕೇಶವಕುಂಜದಲ್ಲಿ ಆಯೋಜಿಸಲಾಗಿದ್ದ "ಸ್ವದೇಶಿ ಮಹತ್ವ ಮತ್ತು ಪ್ರಚಲಿತ ಬೆಳವಣಿಗೆಗಳು" ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ವಿಕಾಸವಾಗಬೇಕಾದರೇ ಕೇಂದ್ರೀಕರಣ ಅತಿ ಅವಶ್ಯ. ವಿಕೇಂದ್ರಿಕರಣದಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ದತ್ತು ಪಂಥ ಕೆಂಗಡಿಯವರ ಜನ್ಮ ಶತಮಾನೋತ್ಸವ ಅಂಗವಾಗಿ 2020 ನವೆಂಬರ್ 10ರವರೆಗೆ ಹಮ್ಮಿಕೊಳ್ಳಲಾದ ಅಭಿಯಾನದಲ್ಲಿ ದತ್ತು ಪಂಥ ಅವರ ಜೀವನ ಚರಿತ್ರೆ ಪ್ರಚಾರ ಮಾಡುವುದು, ರಾಷ್ಟ್ರೀಯ ಕಲ್ಪನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಗ್ರಾಮಾಧಾರಿತ ವಿಕಾಸ ಜಾಗೃತಿಯನ್ನು ಮೂಡಿಸಲಾಗುವುದು ಎಂದು ಹೇಳಿದರು.

Last Updated : Jan 3, 2020, 6:02 PM IST

ABOUT THE AUTHOR

...view details