ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ : ಮೂವರು ಮನೆಗಳ್ಳರ ಬಂಧನ - ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸರಿಂದ ಮನೆ ಕಳ್ಳರ ಬಂಧನ

ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸರು ಮನೆಗಳ್ಳರನ್ನು ಬಂಧಿಸಿದ್ದಾರೆ.

Detention of three house thieves in Hubli
ಹುಬ್ಬಳ್ಳಿಯಲ್ಲಿ ಮೂವರು ಮನೆಗಳ್ಳರ ಬಂಧನ

By

Published : Nov 20, 2020, 9:07 PM IST

ಹುಬ್ಬಳ್ಳಿ :ಮೂವರು ಐನಾತಿ ಮನೆಗಳ್ಳರನ್ನು ವಶಕ್ಕೆ ಪಡೆಯುವಲ್ಲಿ ಗೋಕುಲ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರೇಮಕುಮಾರ ಭೀಮಪ್ಪ ಪೂಜಾರ, ವಿರೇಶ ಜಂಬುನಾಥ ಕಾಂಬಳೆ, ರಾಘವೇಂದ್ರ ಮಲ್ಲಪ್ಪ ಸಲಗಾರ ಬಂಧಿತ ಆರೋಪಿಗಳು. ಇವರು ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

ಪ್ರಕರಣ ತನಿಖೆ ನಡೆಸಿದ ಪೊಲೀಸರು ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ದ್ವಿಚಕ್ರ ವಾಹನ, ಲ್ಯಾಪ್‌ಟಾಪ್, ಟಿವಿ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details