ಹುಬ್ಬಳ್ಳಿ:ನಗರದ ರೈಲ್ವೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ಎರಡು ಅಪರಿಚಿತ ಶವಗಳು ಪತ್ತೆಯಾಗಿವೆ.
ನಗರದಲ್ಲಿ ಅಪರಿಚಿತ ಶವಗಳು ಪತ್ತೆಯಾಗಿದ್ದು, ದಿನಾಂಕ 20-12-2019 ರಂದು ಸುಮಾರು 64 ವರ್ಷದ, 5.6 ಅಡಿ ಎತ್ತರದ, ಗೋದಿಗೆಂಪು ಬಣ್ಣದ ದುಂಡು ಮುಖ ಹಾಗೂ ದಪ್ಪ ಮೂಗು, ಒಂದು ಇಂಚು ಕಪ್ಪು ಹಾಗೂ ಬಿಳಿ ಕೂದಲು ಗಡ್ಡ ಮೀಸೆ ಹೊಂದಿರುವ ಧೃಡ ಶರೀದ ವ್ಯಕ್ತಿ ಖಾಯಿಲೆಯಿಂದ ಬಳಲಿ ಮೃತಪಟ್ಟಿದ್ದಾನೆ. ಮೃತನು ಮೈಮೇಲೆ ಯಾವುದೇ ಬಟ್ಟೆ ಧರಿಸಿರುವುದಿಲ್ಲ.
ಇನ್ನು ದಿನಾಂಕ 08-01-2020 ರಂದು ಸುಮಾರು 55 ರಿಂದ 60 ವರ್ಷದ, 5.8 ಅಡಿ ಎತ್ತರದ, ಕಪ್ಪು ಬಣ್ಣ, ಕೋಲು ಮುಖ ಹಾಗೂ ದಪ್ಪ ಮೂಗು, ಒಂದು ಇಂಚು ಕಪ್ಪು ಹಾಗೂ ಬಿಳಿ ಕೂದಲು ಗಡ್ಡ ಮೀಸೆ ಹೊಂದಿರುವ ತಳ್ಳಗಿನ ವ್ಯಕ್ತಿ ಸ್ವಾಭಾವಿಕವಾಗಿ ಮೃತಪಟ್ಟಿದ್ದಾನೆ. ಮೃತನು ಬಿಳಿ ಬಣ್ಣದ ಉದ್ದನೆಯ ಗೆರೆವುಳ್ಳ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಅಪರಿಚಿ ಶವಗಳ ಗುರುತು ಪತ್ತೆಯಾದವರು ಅಥವಾ ವಾರಸುದಾರರು ದೂರವಾಣಿ ಸಂಖ್ಯೆ 0836-2384751 ಹಾಗೂ ಮೊಬೈಲ್ ಸಂಖ್ಯೆ 9480802126 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.