ಧಾರವಾಡ: ಜಿಲ್ಲೆಯಲ್ಲಿ ನಿನ್ನೆ (ಮಾ.18) ಸುರಿದ ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಬೆಳೆ ನೆಲಕಚ್ಚಿದೆ. ತಾಲೂಕಿನ ಪುಡಕಲಕಟ್ಟಿ ಗ್ರಾಮದ ರೈತರೊಬ್ಬರ ಬಾಳೆ ತೋಟ ಸಂಫೂರ್ಣವಾಗಿ ಹಾನಿಯಾಗಿದೆ.
ಧಾರವಾಡ: ಅಕಾಲಿಕ ಮಳೆಗೆ ಬಾಳೆ ತೋಟ ನಾಶ - ಧಾರವಾಡದಲ್ಲಿ ಅಕಾಲಿಕ ಮಳೆಗೆ ಬಾಳೆ ತೋಟ ನಾಶ
ಧಾರವಾಡದಲ್ಲಿ ನಿನ್ನೆ ಸುರಿದ ಅಕಾಲಿಕ ಮಳೆಯಿಂದ ರೈತರೊಬ್ಬರ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಮಂಜುನಾಥ ತರ್ಲಗಟ್ಟಿ ಎಂಬುವವರಿಗೆ ಸೇರಿದ ಬಾಳೆ ತೋಟ ಇದಾಗಿದೆ.

ಅಕಾಲಿಕ ಮಳೆಗೆ ಬಾಳೆ ತೋಟ ನಾಶ
ಅಕಾಲಿಕ ಮಳೆಗೆ ಬಾಳೆ ತೋಟ ನಾಶ
ರೈತ ಮಂಜುನಾಥ ತರ್ಲಘಟ್ಟಿ ಎಂಬುವವರಿಗೆ ಸೇರಿದ 3 ಎಕರೆ ಬಾಳೆ ತೋಟವು ಮಳೆಯ ಅಬ್ಬರಕ್ಕೆ ನೆಲಕಚ್ಚಿದ್ದು, ಅಂದಾಜು ₹ 8 ಲಕ್ಷ ಮೌಲ್ಯ ಬೆಳೆ ನಷ್ಟವಾಗಿದೆ.
ಪ್ರವಾಹದಿಂದ ಕಂಗಾಲಾಗಿದ್ದ ರೈತರು ಈಚೆಗಷ್ಟೇ ಸುಧಾರಿಸಿಕೊಳ್ಳುತ್ತಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಅಕಾಲಿಕ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡುವಂತೆರ ರೈತರು ಆಗ್ರಹಿಸಿದ್ದಾರೆ.