ಧಾರವಾಡ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಟಾಂಗ್ ನೀಡಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ, ಅರಿವು ಮರೆವು ಹಾಗೂ ಕುಂಟುವಂತ ಸರ್ಕಾರ ಎಂದು ಸಿದ್ದರಾಮಯ್ಯ ಹೇಳ್ತಾರೆ. ಅದೇ ಅರಿವು ಮರೆವು ಸರ್ಕಾರ ಜನರ ಅಭಿವೃದ್ಧಿಗೆ ಕೋಟಿ ಕೋಟಿ ಕೋಟಿ ಖರ್ಚು ಮಾಡಿದ್ದು, ಎಸ್ಸಿ ಎಸ್ಟಿ ಜನರಿಗೆ ಮೀಸಲಾತಿ ತಂದಿದ್ದು ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ನಡೆದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ತುಪ್ಪರಿ ಹಳ್ಳ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿರುವುದು ಬಿಜೆಪಿ ಸರ್ಕಾರ. ಸಿದ್ದರಾಮಯ್ಯ ಅವರೇ ಅರಿವು ಮರೆವು ಇರುವುದು ನಮಗಲ್ಲ, ನಿಮಗೆ. ವಿಧಾನ ಸಭೆಯಲ್ಲಿ ಪಂಚೆ ಕಳಚಿ ಬಿದ್ದರೂ ಗೊತ್ತಾಗದ ನಿಮಗೆ ಅರಿವು ಮರೆವು ಇರುವುದು ಎಂದು ಹರಿಹಾಯ್ದರು.