ಕರ್ನಾಟಕ

karnataka

ETV Bharat / state

ಉಚಿತ ಹೊಲಿಗೆ ಯಂತ್ರಕ್ಕೆ ಹಣದ ಬೇಡಿಕೆ: ಜಿ ಪಂ ಸದಸ್ಯೆ ವಿರುದ್ಧ ಜನಾಕ್ರೋಶ

ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿಯ ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳಾ ಹರಿಜನ್ ಎಂಬುವರು ಹೊಲಿಗೆ ಯಂತ್ರಗಳನ್ನು ಮುತ್ತಳ್ಳಿ ಗ್ರಾಮದಲ್ಲಿನ ತಮ್ಮ ತವರು ಮನೆಯಲ್ಲಿಯೇ ಇರಿಸಿಕೊಂಡಿದ್ದು, ಹಣ ಪಡೆದು ವಿತರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಉಚಿತ ಹೊಲಿಗೆ ಯಂತ್ರಕ್ಕೆ ಹಣದ ಬೇಡಿಕೆ

By

Published : Oct 12, 2019, 11:46 PM IST

ಹುಬ್ಬಳ್ಳಿ: ಹೊಲಿಗೆ ಯಂತ್ರ ವಿತರಣೆ ಮಾಡಲು ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾ ಪಂಚಾಯತಿ ವತಿಯಿಂದ ಅಂಗವಿಕಲ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಕೊಡಲಾಗುತ್ತಿದೆ. ಆದರೆ, ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿಯ ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳಾ ಹರಿಜನ್ ಎಂಬುವರು ಹೊಲಿಗೆ ಯಂತ್ರಗಳನ್ನು ಮುತ್ತಳ್ಳಿ ಗ್ರಾಮದಲ್ಲಿನ ತಮ್ಮ ತವರು ಮನೆಯಲ್ಲಿಯೇ ಇರಿಸಿಕೊಂಡಿದ್ದು, ಹಣ ಪಡೆದು ವಿತರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಉಚಿತ ಹೊಲಿಗೆ ಯಂತ್ರಕ್ಕೆ ಹಣದ ಬೇಡಿಕೆ

ವ್ಯಕ್ತಿಯೋರ್ವ ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಹಿನ್ನೆಲೆ ಮಂಜುಳಾ ಹರಿಜನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details