ಕರ್ನಾಟಕ

karnataka

'ನನ್ನಾಕಿ ಹೃದಯದಲ್ಲಿರಲಿ, ಗಾಡಿ ನಂಬರ್‌ಪ್ಲೇಟ್ ಮೇಲಲ್ಲ': ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರ FB ಪೋಸ್ಟ್ ವೈರಲ್‌

By

Published : Jul 9, 2023, 9:08 AM IST

ನಂಬರ್‌ಪ್ಲೇಟ್​ ಮೇಲೆ ನೋಂದಣಿ ಸಂಖ್ಯೆ ನಮೂದಿಸದ ವ್ಯಕ್ತಿಯ ಬೈಕ್ ವಶಕ್ಕೆ ಪಡೆದಿರುವ ಧಾರವಾಡ ಸಂಚಾರಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

defective-number-plate-dot-legal-action-taken-againt-person-by-dharwad-police
ನನ್ನಾಕಿ ಹೃದಯದಲ್ಲಿರಲಿ ಗಾಡಿ ನಂಬರ್​ ಪ್ಲೇಟ್ ಮೇಲಲ್ಲ: ವೈರಲ್ ಆಯ್ತು ಪೊಲೀಸರ ಪೋಸ್ಟ್!

ಧಾರವಾಡ : 'ನನ್ನಾಕಿ ಹೃದಯದಲ್ಲಿರಲಿ, ಗಾಡಿ ನಂಬರ್‌ ಪ್ಲೇಟ್ ಮೇಲಲ್ಲ' ಎಂದು ಹುಬ್ಬಳ್ಳಿ- ಧಾರವಾಡ ನಗರ ಪೊಲೀಸರು ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ತಮ್ಮ ವಾಹನದ ನಂಬರ್‌ಪ್ಲೇಟ್ ಮೇಲೆ ನೋಂದಣಿ ಸಂಖ್ಯೆ ನಮೂದಿಸದೇ ಇದ್ದುದಕ್ಕೆ ಬೈಕ್ ವಶಕ್ಕೆ ಪಡೆದ ಸಂಚಾರಿ ಪೊಲೀಸರು ಕೋರ್ಟ್​ ನೋಟಿಸ್​ ಜಾರಿ ಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ.

ವ್ಯಕ್ತಿಯೊಬ್ಬರು ತಮ್ಮ ಬೈಕ್‌ನ ನಂಬರ್‌ಪ್ಲೇಟ್ ಮೇಲೆ 'ನನ್ನಾಕಿ' ಎಂದು ಬರೆದುಕೊಂಡು ಸಂಚರಿಸುತ್ತಿದ್ದ ಬೈಕ್ ಅ​ನ್ನು ಸಂಚಾರಿ ಪೊಲೀಸರು ಗಮನಿಸಿದ್ದರು. ನಂಬರ್‌ಪ್ಲೇಟ್​ನಲ್ಲಿ ನೋಂದಣಿ ಸಂಖ್ಯೆಯ ಬದಲಿಗೆ ನನ್ನಾಕಿ ಎಂದು ಹಾಕಿಕೊಂಡಿದ್ದರು. ಬೈಕ್‌ ವಶಕ್ಕೆ ಪಡೆದಿರುವ ಧಾರವಾಡ ಸಂಚಾರಿ ಪೊಲೀಸರು ಕೋರ್ಟ್ ನೋಟೀಸ್ ಜಾರಿ ಮಾಡಿದ್ದಾರೆ. ಇದರ ಜೊತೆಗೆ, ನಂಬರ್‌ಪ್ಲೇಟ್​ ಹಾಕಿಸಿ ಸವಾರನಿಗೆ ಕಾನೂನು ತಿಳುವಳಿಕೆ ನೀಡಿದ್ದಾರೆ.

ಪೊಲೀಸರಿಂದ ಕುತೂಹಲಕಾರಿ ಫೇಸ್​ಬುಕ್​ ಪೋಸ್ಟ್:ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿರುವ ಹುಬ್ಬಳ್ಳಿ- ಧಾರವಾಡ ನಗರ ಪೊಲೀಸರು, ನನ್ನಾಕಿ ಹೃದಯದಲ್ಲಿರಲಿ, ಗಾಡಿ ನಂಬರ್‌ಪ್ಲೇಟ್ ಮೇಲಲ್ಲ. ಡಿಫೆಕ್ಟಿವ್​ ನಂಬರ್‌ಪ್ಲೇಟ್​ ಹಾಕಿ ಸಂಚರಿಸುತ್ತಿದ್ದ ಬೈಕ್ ಅ​ನ್ನು ಧಾರವಾಡ ಸಂಚಾರ ಪೊಲೀಸರು ವಶಪಡಿಸಿಕೊಂಡು ಕೋರ್ಟ್​ ನೋಟಿಸ್​ ಜಾರಿ ಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ. ಬೈಕ್​ಗೆ ನಂಬರ್‌ಪ್ಲೇಟ್​ ಹಾಕಿಸಿ ಸವಾರನಿಗೆ ಕಾನೂನು ತಿಳುವಳಿಕೆ ಹೇಳಲಾಗಿರುತ್ತದೆ ಎಂದು ಬರೆದಿದ್ದಾರೆ.

ವೀಲಿಂಗ್, ನಾಲ್ವರ ಬಂಧನ :​ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಾಗ್ಗೆ ಅಪಘಾತಗಳು ವರದಿಯಾಗುತ್ತಿವೆ. ಅತಿ ವೇಗದ ಚಾಲನೆಯಿಂದ ವಾಹನ ಸವಾರರು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಕಳೆದ ಗುರುವಾರ ಹೆದ್ದಾರಿಯ ಪ್ಲೈ ಓವರ್ ಮೇಲೆ ಬೈಕ್ ವೀಲಿಂಗ್ ಮಾಡಿದ್ದ ನಾಲ್ವರನ್ನು ರಾಮನಗರ ಜಿಲ್ಲೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮೊಹಮದ್ ಹುಸೇನ್, ವಾಸೀಂ ಖಾನ್, ಮುಜಾಮೀನ್ ಮತ್ತು ಸುಲ್ತಾನ್‌ ಆರೋಪಿಗಳು. ಇವರು ಓನ್ ವೇಯಲ್ಲಿ ಹುಡುಗಿಯರೊಂದಿಗೆ ವೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದರು. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ​ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಆಧರಿಸಿ ನಾಲ್ವರ ವಿರುದ್ಧ ಮೋಟಾರ್ ವೆಹಿಕಲ್ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ :ಮೊಬೈಲ್​​ನಲ್ಲಿ ಮಾತನಾಡುತ್ತ ಬಸ್ ಚಾಲನೆ : ಚಾಲಕನಿಗೆ 5 ಸಾವಿರ ರೂಪಾಯಿ ದಂಡ

ABOUT THE AUTHOR

...view details