ಹುಬ್ಬಳ್ಳಿ:ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಪುಷ್ಪಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ನೋಟ್ ಲಭ್ಯವಾಗಿದ್ದು, ಸಾವಿನ ದಾರಿ ಹಿಡಿಯಲು ಕಾರಣ ಏನೆಂಬುದು ಬಯಲಾಗಿದೆ.
ಪುಷ್ಪಾ ಸಾವಿಗೂ ಮುನ್ನ ನವನಗರದ ತಮ್ಮ ಸಂಬಂಧಿಯ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟಿದ್ದರು. ನನ್ನ ಸಾವಿಗೆ ಮೇಟಿ ಕುಟುಂಬದವರು ಕಾರಣ. ಪ್ರಮುಖವಾಗಿ ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ಕುಮಾರ್ ಮಹದೇವಪ್ಪ ಮೇಟಿ, ನವೀನ್, ಬಸಪ್ಪ ಮದ್ಲಿಂಗಣ್ಣನವರ ಸೇರಿ ಬಂಧಿತ ಏಳು ಮಂದಿ ಆರೋಪಿಗಳು ಕಾರಣರಾಗಿದ್ದಾರೆ. ನನ್ನ ಗಂಡನನ್ನು ರಾಜಕೀಯ ವೈಷಮ್ಯಕ್ಕೆ ಬಹಳ ಹೀನಾಯವಾಗಿ ಹತ್ಯೆ ಮಾಡಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಲು ಎಷ್ಟೇ ಮನವಿ ಮಾಡಿದರೂ ಪೊಲೀಸರು ನಮಗೆ ಸರಿಯಾಗಿ ಸ್ಪಂದಿಸಿಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ನೋಟ್ ಬರೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಿಐಡಿ ತನಿಖೆ ನಡುವೆಯೇ ಗ್ರಾಪಂ ಸದಸ್ಯ ದೀಪಕ್ ಪಟದಾರಿ ಪತ್ನಿ ಆತ್ಮಹತ್ಯೆ