ಕರ್ನಾಟಕ

karnataka

ETV Bharat / state

ದೀಪಕ್ ಪಟದಾರಿ ಕೊಲೆ ಪ್ರಕರಣ​: ತನಿಖೆ ಚುರುಕುಗೊಳಿಸಿದ ಸಿಐಡಿ

ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಇಂದು ದೀಪಕ್ ಸಹೋದರ ಸಂಜಯ್ ಪಟದಾರಿಯನ್ನು ವಿಚಾರಣೆಗೆ ಕರೆದಿದ್ದಾರೆ.

deepak patadari murder case investigation
ದೀಪಕ್ ಪಟದಾರಿ ಕೊಲೆ ಪ್ರಕರಣ

By

Published : Sep 24, 2022, 12:02 PM IST

Updated : Sep 24, 2022, 12:09 PM IST

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಇಂದು ದೀಪಕ್ ಸಹೋದರನನ್ನು ವಿಚಾರಣೆಗೆ ಕರೆದಿರುವ ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಪಟದಾರಿ ಮರ್ಡರ್ ಕೇಸ್ ತನಿಖೆ ಚುರುಕು: ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ

ನಿನ್ನೆ ಹುಬ್ಬಳ್ಳಿಗೆ ಆಗಮಿಸಿರುವ ಸಿಐಡಿ ಅಧಿಕಾರಿಗಳ ತಂಡ. ಇಂದು ದೀಪಕ್ ಸಹೋದರ ಸಂಜಯ್ ಪಟದಾರಿಯನ್ನು ವಿಚಾರಣೆಗೆ ಕರೆದಿದ್ದಾರೆ. ಜುಲೈ 4 ರಂದು ಗ್ರಾಪಂ ಸದಸ್ಯ ದೀಪಕ್ ಪಟದಾರಿಯನ್ನು ಹುಬ್ಬಳ್ಳಿ ತಾಲೂಕಿನ ರಾಯನಾಳ ಬಳಿ ಕೊಲೆ ಮಾಡಲಾಗಿತ್ತು. ಕಳೆದ ಮೂರು ದಿನಗಳ ಹಿಂದೆ ದೀಪಕ್ ಕೊಲೆ ಕೇಸ್ ಸಿಐಡಿಗೆ ವರ್ಗಾವಣೆಗೊಂಡಿದ್ದು, ಈ ನಿಟ್ಟಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ದೀಪಕ್ ಪಟದಾರಿ ಕೊಲೆ ಪ್ರಕರಣದ ತನಿಖೆ ಚುರುಕು

ಇದನ್ನೂ ಓದಿ:ದೀಪಕ ಪಟದಾರಿ ಕೊಲೆ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ

ಹುಬ್ಬಳ್ಳಿಗೆ ಆಗಮಿಸಿರುವ ಆರು ಜನ ಸಿಐಡಿ ಅಧಿಕಾರಿಗಳ ತಂಡ ಹಳೇ‌ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಂಗ್ರಹ ಮಾಡಿದ್ದು, ಕೊಲೆಯಾದ ಸ್ಥಳಕ್ಕೂ ತೆರಳಿ ಪರಿಶೀಲನೆ ನಡೆಸಿದೆ.

Last Updated : Sep 24, 2022, 12:09 PM IST

ABOUT THE AUTHOR

...view details