ಕರ್ನಾಟಕ

karnataka

ETV Bharat / state

ವೆಂಟಿಲೇಟರ್​​​-ಬೆಡ್ ಸಮಸ್ಯೆ... ಅವ್ಯವಸ್ಥೆಗೆ ಬಲಿಯಾಗುತ್ತಿದ್ದಾರೆ ಕೊರೊನಾ ಸೋಂಕಿತರು!

ಕೊರೊನಾ ಸೋಂಕಿತರಿಗೆ ಕಿಮ್ಸ್ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಲ್ಲಿ ಸರಿಯಾದ ಬೆಡ್ ವ್ಯವಸ್ಥೆ ಮಾಡುತ್ತಿಲ್ಲ. ಸಾಲದ್ದಕ್ಕೆ ವೆಂಟಿಲೇಟರ್ ಫುಲ್ ಎಂದು ಬೋರ್ಡ್​ಗಳನ್ನು ಹಾಕಲಾಗುತ್ತಿದೆ. ಹೀಗಾಗಿ ಸರಿಯಾದ ಚಿಕಿತ್ಸೆಯೂ ಸಿಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

Death rate of Corona infected is increasing
'ವೆಂಟಿಲೇಟರ್​ ಫುಲ್​... ನೋ ಬೆಡ್' ಅವ್ಯವಸ್ಥೆಗೆ ಬಲಿಯಾಗುತ್ತಿದ್ದಾರೆ ಕೊರೊನಾ ಸೋಂಕಿತರು

By

Published : Jul 31, 2020, 1:44 PM IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿರುವುದರ ಜೊತೆಗೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗುತ್ತಿದೆ. ನಿತ್ಯ 5ರಿಂದ 8 ಜನರು ಬಲಿಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿನ ಏರಿಕೆಗೆ ರಾಜ್ಯ ಸರ್ಕಾರದ ನಿಷ್ಕಾಳಜಿಯೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.‌

'ವೆಂಟಿಲೇಟರ್​ ಫುಲ್​... ನೋ ಬೆಡ್'... ಅವ್ಯವಸ್ಥೆಗೆ ಬಲಿಯಾಗುತ್ತಿದ್ದಾರೆ ಕೊರೊನಾ ಸೋಂಕಿತರು

ಕೊರೊನಾ ಸೋಂಕಿತರಿಗೆ ಕಿಮ್ಸ್ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಲ್ಲಿ ಸರಿಯಾದ ಬೆಡ್ ವ್ಯವಸ್ಥೆ ಮಾಡುತ್ತಿಲ್ಲ. ಸಾಲದ್ದಕ್ಕೆ ವೆಂಟಿಲೇಟರ್ ಫುಲ್ ಎಂದು ಬೋರ್ಡ್​ಗಳನ್ನು ಹಾಕಲಾಗುತ್ತಿದೆ. ಹೀಗಾಗಿ ಸರಿಯಾದ ಚಿಕಿತ್ಸೆಯೂ ಸಿಗದೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ.

ಕಿಮ್ಸ್​​ನ 32 ವೆಂಟಿಲೇಟರ್​​​ಗಳು ಈಗಾಗಲೇ ಬಳಕೆಯಲ್ಲಿವೆ. 800 ಬೆಡ್​​ಗಳ ಕೋವಿಡ್ ಕೇರ್ ಸೆಂಟರ್ ತೆರೆದರೂ ಇನ್ನೂ ವೆಂಟಿಲೇಟರ್ ವ್ಯವಸ್ಥೆ ಮಾಡದೆ ಜಿಲ್ಲಾಡಳಿತ ಎಡವಿದೆ. ರಾಜ್ಯ ಸರ್ಕಾರಕ್ಕೆ 40 ಹೆಚ್ಚುವರಿ ವೆಂಟಿಲೇಟರ್ ನೀಡಿ ಎಂದು ಮನವಿ ಮಾಡಿದ್ದರೂ ಸರ್ಕಾರ ಮಾತ್ರ ಮನವಿಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಪ್ರತಿನಿತ್ಯ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬರುತ್ತಿರುವ ರೋಗಿಗಳಿಗೆ ಸೂಕ್ತ ಬೆಡ್ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ.‌ ಇದರಿಂದ ನಿತ್ಯ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 116 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ABOUT THE AUTHOR

...view details