ಹುಬ್ಬಳ್ಳಿ:ಮಹಾಮಾರಿ ಕೋವಿಡ್ಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಹಾಕಲಾಗಿದ್ದ ಲಾಕ್ಡೌನ್ನಿಂದ ಸೋಂಕಿತರ ಪ್ರಮಾಣ ಕೊಂಚ ಹತೋಟಿಗೆ ಬಂದಿದೆ. ಆದ್ರೆ ಮೃತರ ಪ್ರಮಾಣ ನಿರೀಕ್ಷೆಯಷ್ಟು ನಿಯಂತ್ರಣಗೊಂಡಿಲ್ಲ.
ಧಾರವಾಡ ಜಿಲ್ಲೆಯಲ್ಲಿಯೂ ಸೋಂಕಿತರ ಪ್ರಮಾಣ ದಿನೇ ದಿನೆ ಇಳಿಮುಖವಾಗುತ್ತಿದ್ದರೂ ಕೂಡ ಡೆತ್ ರೇಟ್ ಮಾತ್ರ ಕಡಿಮೆ ಆಗುತ್ತಿಲ್ಲ. ಇದ್ರಿಂದ ಜಿಲ್ಲೆಯ ಜನರು ಆತಂಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಮರಣ ಮೃದಂಗ ಸದ್ದು ಹೆಚ್ಚುತ್ತಲೇ ಇದೆ. ಏಪ್ರಿಲ್ನಿಂದ ಈವರೆಗಿನ ಸಾವಿನ ಸಂಖ್ಯೆ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. 72 ದಿನಗಳಲ್ಲಿ 417 ಜನರು ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ.