ಧಾರವಾಡ:ಮಹಾರಾಷ್ಟ್ರದ ನಾಗಪುರದಲ್ಲಿ ಭಾರತೀಯ ಸೇನಾ ತರಬೇತಿ ಸಮಯದಲ್ಲಿ ಧಾರವಾಡದ ಯೋಧನೋರ್ವ ಸಾವನ್ನಪ್ಪಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಸೇನೆ ಸೇರಿದ್ದ ಧಾರವಾಡ ಯುವಕ ತರಬೇತಿ ವೇಳೆ ಸಾವು: ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ - dharawada soldier mahesha singanahalli latest news
ತರಬೇತಿ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದು ತಾಲೂಕಿನ ನಿಗದಿ ಗ್ರಾಮದ ಯೋಧ ಮಹೇಶ ಸಿಂಗನಹಳ್ಳಿ (20) ಸಾವನ್ನಪ್ಪಿದ್ದಾರೆ. ನಾಳೆ ಸ್ವಗ್ರಾಮ ನಿಗದಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ.

ತರಬೇತಿ ಸಮಯದಲ್ಲಿ ಪೆಟ್ಟು ಬಿದ್ದು ಯೋಧ ಸಾವು: ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ!
ತರಬೇತಿ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದು ತಾಲೂಕಿನ ನಿಗದಿ ಗ್ರಾಮದ ಮಹೇಶ ಸಿಂಗನಹಳ್ಳಿ(20) ಮೃತಪಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಮಹೇಶ್ ಸೇನೆಗೆ ಸೇರಿದ್ದು, ಮಹಾರಾಷ್ಟ್ರದ ನಾಗಪುರದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದರು.
ತಂದೆ-ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಯೋಧ ಮಹೇಶ್ ಅಗಲಿದ್ದು, ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ನಾಳೆ ಸ್ವಗ್ರಾಮ ನಿಗದಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.