ಹುಬ್ಬಳ್ಳಿ: ಕಳವು ಆರೋಪವನ್ನು ಪೊಲೀಸರಿಗೆ ತಿಳಿಸಿದ ಕಾರಣಕ್ಕೆ ಯುವಕನೊಬ್ಬನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕುಸುಗಲ್ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಹತ್ತಿರ ಜರುಗಿದೆ.
ವಿನೋಬಾನಗರದ ರಾಹುಲ್ ಅಲಿಯಾಸ್ ಬಬ್ಲೂ ಬಂಡಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಿಮೆಂಟ್ ಚಾಳದ ಪ್ರಭುರಾಜ ಕಲ್ಲೂಸಾ, ಜನತಾ ಕ್ವಾರ್ಟರ್ಸ್‌ನ ಪ್ರಶಾಂತ ಬೊಮ್ಮಾಜಿ ಎಂಬುವರು ಹಲ್ಲೆ ಮಾಡಿದ್ದಾರೆ.