ಕರ್ನಾಟಕ

karnataka

ETV Bharat / state

ಕಾನೂನು ಬಾಹಿರ ಚಟುವಟಿಕೆ ನಡೆಸಿದ್ರೆ ಸುಮ್ಮನಿರಲ್ಲ: ಕ್ರಿಮಿನಲ್​ಗಳಿಗೆ ಕೃಷ್ಣಕಾಂತ್​ ಖಡಕ್ ಎಚ್ಚರಿಕೆ - P. Krishnakantha alerted to criminals

ಹು-ಧಾ ಅವಳಿ ಜಿಲ್ಲೆಯ ಕ್ರೈಂಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಡಿಸಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್​ ರಾತ್ರಿ ವೇಳೆ ನಗರದ ಸೆಟ್ಲಮೆಂಟ್​ ಪ್ರದೇಶಕ್ಕೆ ಭೇಟಿ ನೀಡಿ ಕ್ರಿಮಿನಲ್​ಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

dcp-krishnakantha
ಪಿ.ಕೃಷ್ಣಕಾಂತ

By

Published : Nov 18, 2020, 3:49 PM IST

ಹುಬ್ಬಳ್ಳಿ:ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ನಾವು ಸುಮ್ಮನಿರಲ್ಲ ಎಂದು ನಗರದ ವಿವಿಧ ಕ್ರಿಮಿನಲ್​ಗಳಿಗೆ ಡಿಸಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್​ ಎಚ್ಚರಿಸಿದ್ದಾರೆ.

ಪಿ.ಕೃಷ್ಣಕಾಂತ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ
ಅಕ್ರಮವಾಗಿ ಮಾರಕಾಸ್ತ್ರಗಳನ್ನ ಹೊಂದಿದ್ದರೆಂಬ ಆರೋಪದಲ್ಲಿ ಸೆಟ್ಲಮೆಂಟ್ ಹಾಗೂ ಇನ್ನುಳಿದ ಪ್ರದೇಶಗಳ ಹಲವು ಜನರನ್ನು ತಡರಾತ್ರಿಯವರೆಗೂ ಬೆಂಡಿಗೇರಿ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟ ಮಾರಕಾಸ್ತ್ರಗಳ ಬಗ್ಗೆ ಮಾಹಿತಿ ನೀಡುವಂತೆಯೂ ತಾಕೀತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾತ್ರೋರಾತ್ರಿ ನಡೆದ ಈ ಕಾರ್ಯಾಚರಣೆ ಸೆಟ್ಲಮೆಂಟ್ ಪ್ರದೇಶದಲ್ಲಿನ ಕೆಲವರಿಗೆ ನಡುಕ ಹುಟ್ಟಿಸಿದೆ.

For All Latest Updates

TAGGED:

ABOUT THE AUTHOR

...view details