ಧಾರವಾಡ:ಜಿಲ್ಲೆಯಿಂದ ಹೊರಗಿದ್ದುಕೊಂಡು ಐತಿಹಾಸಿಕ ಜಯ ಸಾಧಿಸಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳು ಒತ್ತಾಯಿಸಿದರು.
ಮುರುಘಾ ಮಠದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ವಧರ್ಮ ನಾಯಕನಾಗಿರುವ ವಿನಯ್ ಕುಲಕರ್ಣಿ ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕರಾಗಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ಕೊಟ್ಟು ಗೌರವ ನೀಡಬೇಕು ಎಂದು ಆಗ್ರಹಿಸಿದರು. ಇದು ನಮ್ಮ ಸ್ವಂತದ ವಿಚಾರ, ಅವರು ಡಿಸಿಎಂ ಆಗಬೇಕು. ಲಿಂಗಾಯತ ನಾಯಕರಿಗೆ ನೀಡಬೇಕು. ಅದರಲ್ಲೂ ವಿನಯ್ ಅವರಿಗೆ ನೀಡೋದು ಮುಖ್ಯ. ವಿನಯ್ ಅವರ ಬಗ್ಗೆ ವಿಶೇಷ ಒಲವು ನಮಗಿದೆ ಎಂದರು.