ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಮೇಲೆ ಜೆಡಿಎಸ್​​ಗೆ ನಂಬಿಕೆಯಿಲ್ಲ: ಡಿಸಿಎಂ ಗೋವಿಂದ ಕಾರಜೋಳ - ಜೆಡಿಎಸ್​​ಗೆ ಕೆಟ್ಟ ಮೇಲೆ‌ ಬುದ್ದಿ

2019-20ರಲ್ಲಿ 35 ಸಾವಿರ ಕೋಟಿ ರೂ., 2020-21ರಲ್ಲಿ 25 ಸಾವಿರ ಕೋಟಿ ರೂ. ಹಾನಿ‌ಯಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ವರ್ಷದಲ್ಲಿ 60 ಸಾವಿರ ಕೋಟಿ ರೂ. ಹಾನಿಯಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ವಿವರಿಸಿದರು.

dcm govinda karajola talk about jds party issue
ಡಿಸಿಎಂ ಕಾರಜೋಳ

By

Published : Dec 22, 2020, 7:10 PM IST

ಧಾರವಾಡ: ಕಾಂಗ್ರೆಸ್​​ನವರ ಮೇಲೆ ಜೆಡಿಎಸ್​​ನವರಿಗೆ ನಂಬಿಕೆ ಇಲ್ಲ. ಜೆಡಿಎಸ್​​ಗೆ ಕೆಟ್ಟ ಮೇಲೆ‌ ಬುದ್ಧಿ ಬಂದಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರಶ್ನಾತೀತ ನಾಯಕರ ಅವಧಿ ಮುಗಿಯುವವರೆಗೆ ಅವರೇ ಸಿಎಂ ಆಗಿರ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎರಡು ವರ್ಷದಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು, ಕಳೆದ ವರ್ಷ 7 ಸಾವಿರ ಕೋಟಿಯಷ್ಟು ಹಾನಿಯಾಗಿದೆ. ಈ ವರ್ಷ 3,500 ಕೋಟಿ ರೂ.ನಷ್ಟು ಹಾನಿಯಾಗಿದೆ ಎಂದು ಹೇಳಿದರು.

ಓದಿ: ಕರಾವಳಿ ಮತ್ತು ಮೀನುಗಾರರ ರಕ್ಷಣೆಗೆ ನೂತನ 'ಕಡಲು' ಆ್ಯಪ್​​

2019-20ರಲ್ಲಿ 35 ಸಾವಿರ ಕೋಟಿ ರೂ. ಹಾನಿಯಾಗಿದೆ. 2020-21ರಲ್ಲಿ 25 ಸಾವಿರ ಕೋಟಿ ರೂ. ಹಾನಿ‌ಯಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ವರ್ಷದಲ್ಲಿ 60 ಸಾವಿರ ಕೋಟಿ ರೂ. ಹಾನಿಯಾಗಿದೆ. 7,348 ಕಿಲೋ ಮೀಟರ್ ರಸ್ತೆ ಹಾನಿಯಾಗಿದೆ. ಶೇ. 70ರಷ್ಟು ರಸ್ತೆ ರಿಪೇರಿ ನಡೆದಿದೆ ಎಂದರು.

ಇನ್ನು ಇಲಾಖೆಯಲ್ಲಿ ಇಂಜಿನಿಯರ್​ಗಳ ಕೊರತೆ ವಿಚಾರದ ಬಗ್ಗೆ ಮಾತನಾಡಿದ ಅವರು, ನೇಮಕಾತಿಯಲ್ಲಿ ವಿಳಂಬವಾಗಿರುವ ಹಿನ್ನೆಲೆ ಹೊರಗುತ್ತಿಗೆ ಆಧಾರದ ಮೇಲೆ ಇಂಜಿನಿಯರ್​​ಗಳನ್ನು ತೆಗೆದುಕೊಳ್ಳಬೇಕು. ರಾಜ್ಯದಲ್ಲಿ 990 ಇಂಜಿನಿಯರ್​​ಗಳನ್ನು ಹೊರಗುತ್ತಿಗೆ ತೆಗೆದುಕೊಳ್ಳಲು ಆಧಿಕಾರಿಗಳಿಗೆ ಡಿಸಿಎಂ ಕಾರಜೋಳ ಸೂಚಿಸಿದರು.

ABOUT THE AUTHOR

...view details