ಹುಬ್ಬಳ್ಳಿ:ಲಾಕ್ಡೌನ್ ಹಿನ್ನೆಲೆ ಹುಬ್ಬಳ್ಳಿ-ಧಾರವಾಡದಲ್ಲಿ ಜನರು ಹೊರ ಬರದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ. ಈ ನಡುವೆ ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದೆ.
ಅವಳಿ ನಗರದ ಪರಿಸ್ಥಿತಿ ಅರಿಯಲು ಕಂಟ್ರೋಲ್ ರೂಮ್ಗೆ ಖುದ್ದು ಭೇಟಿ ನೀಡಿದ ಡಿಸಿ - dc deepa ckolan
ಲಾಕ್ಡೌನ್ ಹಿನ್ನೆಲೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸ್ಥಿತಿ ಅವಲೋಕಿಸಲು ಖುದ್ದು ಜಿಲ್ಲಾಧಿಕಾರಿ ದೀಪಾ ಚೋಳನ್ ನಗರದ ಸಿಸಿಟಿವಿ ಕಂಟ್ರೋಲ್ ರೂಮ್ಗೆ ಆಗಮಿಸಿದ್ದರು.
![ಅವಳಿ ನಗರದ ಪರಿಸ್ಥಿತಿ ಅರಿಯಲು ಕಂಟ್ರೋಲ್ ರೂಮ್ಗೆ ಖುದ್ದು ಭೇಟಿ ನೀಡಿದ ಡಿಸಿ DC visited the Control Room to ascertain the situation in Hubli city](https://etvbharatimages.akamaized.net/etvbharat/prod-images/768-512-6831770-682-6831770-1587126309331.jpg)
ಹುಬ್ಬಳ್ಳಿ ನಗರದ ಪರಿಸ್ಥಿತಿ ಅರಿಯಲು ಕಂಟ್ರೋಲ್ ರೂಮ್ಗೆ ಖುದ್ದು ಭೇಟಿ ನೀಡಿದ ಜಿಲ್ಲಾಧಿಕಾರಿ
ಬಿಆರ್ಟಿಎಸ್ ಕಾರಿಡಾರ್ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕಾರ್ಯವೈಖರಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಪರಿಶೀಲಿಸಿದ್ದಾರೆ. ಹುಬ್ಬಳ್ಳಿಯ ಬಿಆರ್ಟಿಎಸ್ ಕಂಟ್ರೋಲ್ ರೂಮ್ಗೆ ಆಗಮಿಸಿದ ಜಿಲ್ಲಾಧಿಕಾರಿ, ನಗರದ ಹಲವು ಕಡೆ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಚ್.ಡಿ.ಬಿ.ಆರ್.ಟಿ.ಎಸ್ನ ಉಪ ಪ್ರಧಾನ ವ್ಯವಸ್ಥಾಪಕ ಗಣೇಶ ರಾಠೋಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.