ಕರ್ನಾಟಕ

karnataka

ETV Bharat / state

ಧಾರವಾಡ: ಪಿಂಕ್ ಬೂತ್‍ಗೆ ಭೇಟಿ ನೀಡಿ ಮಹಿಳಾ ಸಿಬ್ಬಂದಿಗೆ ಶುಭ ಕೋರಿದ ಜಿಲ್ಲಾಧಿಕಾರಿ

ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್-19 ಲಸಿಕಾಕರಣ ಕೇಂದ್ರವು ಇಂದು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಪಿಂಕ್ ಬಣ್ಣದ ಸೀರೆಯುಟ್ಟ ಮಹಿಳಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಲಸಿಕಾ ಕೇಂದ್ರಕ್ಕೆ ಆಗಮಿಸುವ ಹಿರಿಯ ನಾಗರಿಕರನ್ನು ಹಸನ್ಮುಖದಿಂದ ಸ್ವಾಗತಿಸಿ ಸೇವೆ ನೀಡಿದರು.

ಮಹಿಳಾ ಸಿಬ್ಬಂದಿ
ಮಹಿಳಾ ಸಿಬ್ಬಂದಿ

By

Published : Mar 8, 2021, 5:26 PM IST

ಧಾರವಾಡ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆವಿಶೇಷವಾಗಿ ರೂಪಿಸಿರುವ ಜಿಲ್ಲಾಸ್ಪತ್ರೆಯ ಕೋವಿಡ್-19 ಲಸಿಕಾಕರಣದ ಪಿಂಕ್ ಬೂತ್‍ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿ, ಮಹಿಳಾ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ಕೋರಿದರು.

ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್-19 ಲಸಿಕಾಕರಣ ಕೇಂದ್ರವು ಇಂದು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಪಿಂಕ್ ಬಣ್ಣದ ಸೀರೆಯುಟ್ಟ ಮಹಿಳಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಲಸಿಕಾ ಕೇಂದ್ರಕ್ಕೆ ಆಗಮಿಸುವ ಹಿರಿಯ ನಾಗರಿಕರನ್ನು ಹಸನ್ಮುಖದಿಂದ ಸ್ವಾಗತಿಸಿ ಸೇವೆ ನೀಡಿದರು.

ಧಾರವಾಡ ಮಹಾಂತ ನಗರದ ನಿವಾಸಿ 93 ವರ್ಷ ವಯೋಮಾನದ ನಿರ್ಮಲ ತಿಪ್ಪಣ್ಣವರ ಎಂಬ ಹಿರಿಯ ಮಹಿಳೆ ಕೋವಿಡ್-19 ರೋಗ ನಿರೋಧಕ ವ್ಯಾಕ್ಸಿನ್ ಪಡೆಯುವುದನ್ನು ಸಾಕ್ಷೀಕರಿಸಿ, ಪ್ರಮಾಣ ಪತ್ರ ನೀಡಿದರು.

ಹಿರಿಯ ಮಹಿಳೆ ಕೋವಿಡ್-19 ವ್ಯಾಕ್ಸಿನ್ ಪಡೆಯುವುದನ್ನು ಸಾಕ್ಷೀಕರಿಸಿ, ಪ್ರಮಾಣ ಪತ್ರ ನೀಡಲಾಯಿತು

ಬಾಗಲಕೋಟೆಯಲ್ಲಿ ವೈದ್ಯ ವೃತ್ತಿ ನಿರ್ವಹಿಸುತ್ತಿರುವ 24 ವರ್ಷದ ವೈದ್ಯೆ ಡಾ. ಸೌಮ್ಯ ಎನ್.ಜಿ. ಅವರು ಲಸಿಕೆ ಪಡೆದ ನಂತರ ಅವರಿಗೂ ಜಿಲ್ಲಾಧಿಕಾರಿಗಳು ಪ್ರಮಾಣ ಪತ್ರ ನೀಡಿದರು. ಬಳಿಕ ಮಾತನಾಡಿದ ಅವರು, ಅಗತ್ಯ ದಾಖಲೆಗಳೊಂದಿಗೆ ಬಂದು ಜಿಲ್ಲೆಯ 74 ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್​ ಪಡೆಯಬಹುದಾಗಿದ್ದು, ನಾಗರಿಕರು ಯಾವುದೇ ಆತಂಕ, ಭಯ ಅಥವಾ ಸುಳ್ಳು ವದಂತಿಗಳಿಗೆ ಕಿವಿಗೊಡದೇ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

ABOUT THE AUTHOR

...view details