ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯ ಸ್ಮಶಾನ ಗಾರ್ಡ್​ಗೆ ಕೋವಿಡ್​: ಆತನ ಸಂಪರ್ಕಿತರು ಮಾಹಿತಿ ಹಂಚಿಕೊಳ್ಳಿ- ಡಿಸಿ - ಹುಬ್ಬಳ್ಳಿಯಲ್ಲಿ ಇಂದು ಮತ್ತೊಬ್ಬರಿಗೆ ಸೋಂಕು

ಹುಬ್ಬಳ್ಳಿಯಲ್ಲಿ ಸ್ಮಶಾನ ಕಾಯುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಆತನೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಕೂಡಲೇ ಸಹಾಯವಾಣಿಗೆ ಕರೆ ಮಾಡಿ ತಮ್ಮ ವಿವರ ನೀಡಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Deepa CholanDeepa Cholan
ದೀಪಾ ಚೋಳನ್

By

Published : Apr 18, 2020, 4:19 PM IST

ಧಾರವಾಡ: ಹುಬ್ಬಳ್ಳಿಯಲ್ಲಿ ಇಂದು ಮತ್ತೋರ್ವ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳು ಸಹಾಯವಾಣಿಗೆ ಕರೆ ಮಾಡಿ ತಮ್ಮ ವಿವರ ನೀಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್​ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ಶಹರದ 44ನೇ ವಾರ್ಡ್​ ವ್ಯಾಪ್ತಿಯ ಕರಾಡಿ ಓಣಿಯ ಕಮರಿಪೇಟೆ ನಿವಾಸಿ ಒಬ್ಬರಲ್ಲಿ ಕೋವಿಡ್​ 19 ಇರುವುದು ಪತ್ತೆಯಾಗಿದೆ. ಈತ ಸ್ಮಶಾನ ಕಾಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ. ಪಿ236 ಎಂದು ಹೆಸರಿಸಲಾಗಿದೆ. ಈತ, ಇತರರ ಜೊತೆಗೂಡಿ ಮಾರ್ಚ್ 27ರಂದು ಮುಲ್ಲಾ ಓಣಿಯ ಡಾಕಪ್ಪ ವೃತ್ತ​​ದಿಂದ ಕಾಳಮ್ಮನ ಅಗಸಿ ವ್ಯಾಪ್ತಿಯ ಕಮರಿಪೇಟೆ ಹಾಗೂ ಆನಂದ ನಗರದ ಸಾರ್ವಜನಿಕರಿಗೆ ಉಚಿತ ಆಹಾರ ಧಾನ್ಯ ವಿತರಿಸಿದ್ದ ಎಂದು ತಿಳಿದುಬಂದಿದೆ.

ಸೋಂಕಿತರಿಂದ ಆಹಾರ ಪಡೆದು, ಆತನ ಜೊತೆ ಸಂಪರ್ಕದಲ್ಲಿ ಇದ್ದವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ. ಕೂಡಲೇ ಅವರೆಲ್ಲಾ ಕೊರೊನಾ ಸಹಾಯವಾಣಿ 1077 ಸಂಖ್ಯೆಗೆ ಕರೆ ಮಾಡಿ ತಮ್ಮ ವಿವರ ಹಂಚಿಕೊಳ್ಳಬೇಕು. ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ABOUT THE AUTHOR

...view details