ಧಾರವಾಡ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನರ್ಸ್ ಹಾಗೂ ಆಡಳಿತಾಧಿಕಾರಿ ನಡುವಿನ ಸಂಘರ್ಷ ವಿಚಾರ ಕೊನೆಗೂ ಧಾರವಾಡ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ ಕಂಡಿದೆ.
ಡಿಸಿ ಕಚೇರಿಯಲ್ಲಿ ಕಿಮ್ಸ್ ನಿರ್ದೇಶಕ ಮತ್ತು ನರ್ಸ್ಗಳೊಂದಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆ ನಡೆಸಿ, ಸಮರ್ಪಕ ಸುರಕ್ಷತಾ ಸಾಧನ ನೀಡುವ ಭರವಸೆ ನೀಡಿದ್ದಾರೆ.
ಕರ್ತವ್ಯದ ಸ್ಥಳದಲ್ಲಿ ಊಟ, ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದ್ದು, ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡುವಂತೆ ಡಿಸಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳಲು ನರ್ಸ್‌ಗಳು ನಿರ್ಧಾರ ಮಾಡಿದ್ದಾರೆ.
ಸರಿಯಾಗಿ ಸುರಕ್ಷತಾ ಸಾಮಗ್ರಿಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಕಿಮ್ಸ್ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ವಿರುದ್ಧ ನರ್ಸ್‌ಗಳು, ಅರೆ ವೈದ್ಯಕೀಯ ಸಿಬ್ಬಂದಿ ಆಕ್ರೋಶಗೊಂಡು ನಿನ್ನೆಯಿಂದ ಕರ್ತವ್ಯಕ್ಕೆ ತೆರಳದೆ ದೂರ ಉಳಿದಿದ್ದರು. ಇದೀಗ ಡಿಸಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿದೆ.