ಕರ್ನಾಟಕ

karnataka

ETV Bharat / state

ಹೊರ ರಾಜ್ಯಕ್ಕೆ ಹೋಗುವ ಮತ್ತು ಬರುವರಿಗೆ ಇಲ್ಲಿದೆ ಶುಭ ಸುದ್ದಿ.. ನಿಮ್ಗೆ ಸಹಾಯ ಮಾಡಲಿದೆ ಸೇವಾ ಸಿಂಧು!! - dharwad DC news

ಸೇವಾ ಸಿಂಧು ಯೋಜನೆ ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳ ವಿವಿಧ ಮಾರ್ಗಗಳಿಂದ ಸಮಸ್ತ ನಾಗರಿಕರಿಗೆ ತಲುಪಿಸುವ ಆನ್‌ಲೈನ್ ವ್ಯವಸ್ಥೆಯಾಗಿದೆ. ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಬರದೆ ಆನ್​ಲೈನ್​ನಲ್ಲಿ ಮೊಬೈಲ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

DC Deepa cholan
ಹೊರ ರಾಜ್ಯಕ್ಕೆ ಹೋಗುವ ಮತ್ತು ಬರುವರಿಗೆ ಇಲ್ಲಿದೆ ಶುಭ ಸುದ್ದಿ

By

Published : May 2, 2020, 3:36 PM IST

ಧಾರವಾಡ :ಲಾಕ್​ಡೌನ್ ಮುಂದುವರೆಯಲಿರುವುದರಿಂದ ಕರ್ನಾಟಕ ರಾಜ್ಯದಿಂದ ದೇಶದ ಬೇರೆ ರಾಜ್ಯಗಳಿಗೆ ಹೋಗುವವರು ಹಾಗೂ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು ಕರ್ನಾಟಕ ಸರ್ಕಾರದ ಸೇವಾಸಿಂಧು ಯೋಜನೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಸೇವಾ ಸಿಂಧು ಯೋಜನೆ ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳ ವಿವಿಧ ಮಾರ್ಗಗಳಿಂದ ಸಮಸ್ತ ನಾಗರಿಕರಿಗೆ ತಲುಪಿಸುವ ಆನ್‌ಲೈನ್ ವ್ಯವಸ್ಥೆಯಾಗಿದೆ. ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಬರದೆ ಆನ್​ಲೈನ್​ನಲ್ಲಿ ಮೊಬೈಲ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಪ್ರಯಾಣ ಬಯಸುವವರು,sevasindhu.karnataka.gov.in ಈ ವೆಬ್‌ಸೈಟ್ ಮೂಲಕ ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು ನಮೂದಿಸಬೇಕು. ವಲಸೆ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿ ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ಆಯ್ಕೆ ಮಾಡಬೇಕು. ಪ್ರಸ್ತುತ ವಾಸದ ವಿಳಾಸ, ತಲುಪಬೇಕಾದ ವಿಳಾಸ, ಅಂಚೆ ಪಿನ್‌ಕೋಡ್, ಪ್ರಯಾಣದ ವ್ಯವಸ್ಥೆ, ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ದಾಖಲಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ABOUT THE AUTHOR

...view details