ಕರ್ನಾಟಕ

karnataka

ETV Bharat / state

ವೃದ್ಧರ ಬಗ್ಗೆ‌ ಜಿಲ್ಲಾಧಿಕಾರಿ ದೀಪಾ ಚೋಳನ್‌ ಕಾಳಜಿ.. - ಜಿಲ್ಲಾಧಿಕಾರಿ ದೀಪಾ ಚೋಳನ

ಲಾಕ್​ಡೌನ್​ ಹಿನ್ನೆಲೆಯಲ್ಲಿ ವೃದ್ಧಾಶ್ರಮ ನೋಡಿಕೊಳ್ಳುವ ವ್ಯಕ್ತಿಗೆ ಊಟದ ಜೊತೆಗೆ ಉಪಹಾರದ ವ್ಯವಸ್ಥೆ ಹಾಗೂ ಇತರೆ ದಿನಸಿ ವಸ್ತುಗಳನ್ನು ತೆಗೆದುಕೊಂಡ ಹೋಗುತ್ತಿದ್ದ ವೇಳೆ ತೊ‌ಂದ್ರೆಯಾಗುತ್ತಿತ್ತು. ಸಮಸ್ಯೆಯ ಗಂಭೀರತೆ ಅರಿತ ಜಿಲ್ಲಾಧಿಕಾರಿ ವಾಹನದ ಪಾಸ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.

DC Deepa Cholan is concerned about the elders...
ವೃದ್ಧರ ಬಗ್ಗೆ‌ ಜಿಲ್ಲಾಧಿಕಾರಿ ದೀಪಾ ಚೋಳನ ಕಾಳಜಿ: ವೃದ್ದಾಶ್ರಮ ಮಾಲಿಕನಿಗೆ ವಾಹನದ ಪಾಸ್ ..

By

Published : Mar 31, 2020, 10:20 PM IST

ಧಾರವಾಡ :ಕೆಲಸದ ಒತ್ತಡದ ಮಧ್ಯೆಯೂ ವೃದ್ದಾಶ್ರಮದಲ್ಲಿರುವ ವೃದ್ಧರ ಬಗ್ಗೆ‌ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಕಾಳಜಿ ತೋರಿಸಿದ್ದಾರೆ.

ವೃದ್ಧಾಶ್ರಮ ಮಾಲೀಕನಿಗೆ ವಾಹನದ ಪಾಸ್..

ನವನಗರದಲ್ಲಿ 2004ರಲ್ಲಿ ಆರಂಭವಾಗಿದ್ದ ಮೈತ್ರಿ ವೃದ್ಧಾಶ್ರಮದಲ್ಲಿ ಸದ್ಯಕ್ಕೆ 30ಕ್ಕೂ ಹೆಚ್ಚು ವೃದ್ಧರು ಆಶ್ರಯ ಪಡೆದುಕೊಂಡಿದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ವೃದ್ಧಾಶ್ರಮ ನೋಡಿಕೊಳ್ಳುವ ವ್ಯಕ್ತಿಗೆ ಹುಬ್ಬಳ್ಳಿಯಿಂದ ಬರಲು ಪೊಲೀಸರು ಬಿಡುತ್ತಿರಲಿಲ್ಲ. ಊಟದ ಜೊತೆಗೆ ಉಪಹಾರದ ವ್ಯವಸ್ಥೆ ಹಾಗೂ ಇತರೆ ದಿನಸಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ತೊ‌ಂದರೆಯಾಗುತ್ತಿತ್ತು.

ವೃದ್ಧರ ಬಗ್ಗೆ‌ ಜಿಲ್ಲಾಧಿಕಾರಿ ದೀಪಾ ಚೋಳನ ಕಾಳಜಿ..

ಈ ಬಗ್ಗೆ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಸಮಸ್ಯೆಯ ಗಂಭೀರತೆ ಅರಿತು ವಾಹನದ ಪಾಸ್ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಸಹಾಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details