ಕರ್ನಾಟಕ

karnataka

ETV Bharat / state

ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಪ್ರಕರಣ: ಹಳೇ ಹುಬ್ಬಳ್ಳಿ ಠಾಣೆಗೆ ಡಿಸಿ, ಕಮಿಷನರ್ ದೌಡು - ದೆಹಲಿ ಮೂಲದ ASR ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಕಂಪನಿ

ಆ್ಯಪ್‌ ಮೂಲಕ ಮತದಾರರ ಸರ್ವೇ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಭೇಟಿ ನೀಡಿದ್ದಾರೆ.

DC and Commissioner visit Old Hubli police station
ಹಳೇ ಹುಬ್ಬಳ್ಳಿ ಠಾಣೆಗೆ ಡಿಸಿ, ಕಮಿಷನರ್ ದೌಡು

By

Published : Dec 2, 2022, 2:31 PM IST

ಹುಬ್ಬಳ್ಳಿ:ವಾಣಿಜ್ಯನಗರಿಯಲ್ಲಿ ಆ್ಯಪ್‌ ಮೂಲಕ ಮತದಾರರ ಸರ್ವೆ ಮಾಡುತ್ತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ, ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಹಾಗೂ ಡಿಸಿಪಿ ಗೋಪಾಲ್ ಬ್ಯಾಕೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ್ಯಪ್‌ ಮೂಲಕ ಸರ್ವೇ ಮಾಡಿದ ಆರೋಪ ಹಿನ್ನೆಲೆಯಲ್ಲಿ ವಿರೇಶ್, ಮಂಜುನಾಥ್, ನಿತೇಶ್ ಎಂಬುವರ ವಿರುದ್ದ ದೂರು ದಾಖಲಾಗಿತ್ತು.

ಹಳೇ ಹುಬ್ಬಳ್ಳಿ ಠಾಣೆಗೆ ಡಿಸಿ, ಕಮಿಷನರ್ ದೌಡು

ದೆಹಲಿ ಮೂಲದ ASR ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಕಂಪನಿ ಹೆಸರಲ್ಲಿ ಸರ್ವೇ ಮಾಡಿದ್ದ ಟೀಮ್ ವಿರುದ್ಧ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದ್ದರು. ಈ ದೂರು ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಆಯುಕ್ತರ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಚಿಲುಮೆ ಮಾದರಿಯಲ್ಲಿ ಹುಬ್ಬಳ್ಳಿಯಲ್ಲೂ ಮತದಾರರ ಮಾಹಿತಿ ಸಂಗ್ರಹ ಆರೋಪ: ಮೂವರು ಪೊಲೀಸ್ ವಶಕ್ಕೆ

ABOUT THE AUTHOR

...view details