ಐಯ್ ನನ್ ಶಿವ್ನಾ, ಈ ಬಸ್ ಇಲ್ದಂಗಾಗಿ ಮಾವನ ಮಣ್ಣಿಗೂ ಹೋಗೋಕಾಗವಲ್ದು.. - transport staffs strike news
ಸಾರಿಗೆ ಸಂಸ್ಥೆಗಳ ಬಸ್ ಬಂದ್ ಹಿನ್ನೆಲೆಯಲ್ಲಿ ಬಡ-ಮಧ್ಯಮ ವರ್ಗದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ..
![ಐಯ್ ನನ್ ಶಿವ್ನಾ, ಈ ಬಸ್ ಇಲ್ದಂಗಾಗಿ ಮಾವನ ಮಣ್ಣಿಗೂ ಹೋಗೋಕಾಗವಲ್ದು.. transport staffs strike news](https://etvbharatimages.akamaized.net/etvbharat/prod-images/768-512-9860670-406-9860670-1607829797995.jpg)
ಮಾವನ ಅಂತ್ಯಸಂಸ್ಕಾರಕ್ಕೆ ಹೋಗಲು ಸೊಸೆಯ ಪರದಾಟ
ಹುಬ್ಬಳ್ಳಿ :ಮಹಿಳೆಯೊಬ್ಬರು ತಮ್ಮ ಮಾವನ ಅಂತ್ಯ ಸಂಸ್ಕಾರಕ್ಕೆ ಹೋಗಲು ಸಾಧ್ಯವಾಗದೇ ಹುಬ್ಬಳ್ಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಮಾವನ ಅಂತ್ಯಸಂಸ್ಕಾರಕ್ಕೆ ಹೋಗಲು ಸೊಸೆಯ ಪರದಾಟ..
ಆದ್ರೆ, ಸಾರಿಗೆ ಸಿಬ್ಬಂದಿ ಮುಷ್ಕರ ಇರುವುದರಿಂದ ಕೊಪ್ಪಳದ ಕಡೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಹಳೇ ಬಸ್ ನಿಲ್ದಾಣದಲ್ಲಿ ತನ್ನ ಐದು ವರ್ಷ ಹೆಣ್ಣು ಮಗು ಜೊತೆ ಪರದಾಡುತ್ತಿದ್ದಾರೆ.
ಸದ್ಯ ಕುಷ್ಟಗಿಗೆ ಹೋಗಲು ಬಸ್ ಇಲ್ಲದೆ, ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ಕೊಡಲು ಅಷ್ಟೊಂದು ಹಣವಿಲ್ಲದೇ ದೇವಮ್ಮ ಕಂಗಾಲಾಗಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾರೆ.
Last Updated : Dec 13, 2020, 9:42 AM IST