ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಗಾಳಿ ದುರ್ಗಮ್ಮ ದೇವಸ್ಥಾನದಲ್ಲಿ ಇಡೀ ದಿನ ವಿಶೇಷ ಹೋಮ - ಗಾಳಿದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಹೋಮ

ದಸರಾ, ನವರಾತ್ರಿ ಹಿನ್ನೆಲೆ ಹುಬ್ಬಳ್ಳಿ ನಗರದ ಹೊಸ ಗಬ್ಬೂರ ಕ್ರಾಸ್ ಬಳಿ ಇರುವ ಗಾಳಿ ದುರ್ಗಮ್ಮ ದೇವಸ್ಥಾನದಲ್ಲಿ ಇಡೀ ದಿನ ಲೋಕಕಲ್ಯಾಣ ಅರ್ಥ ಗಣ ಹೋಮ, ಚಂಡಿಕಾ ಹೋಮ, ರುದ್ರ ಹೋಮ, ದುರ್ಗಾ ಹೋಮ ಸೇರಿದಂತೆ ವಿವಿಧ ಹೋಮಗಳನ್ನು ಬೆಳಿಗ್ಗೆಯಿಂದ ಆರಂಭಿಸಿ ಸಾಯಂಕಾಲದವರೆಗೆ ಮಾಡಲಾಗುತ್ತದೆ.

navaratri celebration in hubli temples
ಗಾಳಿದುರ್ಗಮ್ಮ ದೇವಾಲಯದಲ್ಲಿ ವಿಜೃಂಭಣೆಯ ನವರಾತ್ರಿ

By

Published : Oct 24, 2020, 5:38 PM IST

ಹುಬ್ಬಳ್ಳಿ: ದಸರಾ ಹಬ್ಬ ಹಾಗೂ ನವರಾತ್ರಿ ಅಂಗವಾಗಿ, ಗಾಳಿದುರ್ಗಮ್ಮ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ನವದೇವತೆಯರ ಆರಾಧನೆ, ವಿವಿಧ ಅಲಂಕಾರಗಳ ಜೊತೆಗೆ ವಿಶೇಷ ಪೂಜೆ ನೆರವೇರಿಸಲಾಯ್ತು.

ಗಾಳಿದುರ್ಗಮ್ಮ ದೇವಾಲಯದಲ್ಲಿ ವಿಜೃಂಭಣೆಯ ನವರಾತ್ರಿ

ನವರಾತ್ರಿ ಬಂದ್ರೆ ಸಾಕು ಎಲ್ಲರ ಮನೆಯಲ್ಲಿ ದೇವತೆಗಳಿಗೆ ಪೂಜೆ, ಪುರಸ್ಕಾರಗಳು ಬಲು ಜೋರಾಗಿರುತ್ತೆ. ದೇವಸ್ಥಾನಗಳಲ್ಲಿನ ದೇವತೆಯರಿಗೆ ಸಲ್ಲಿಕೆಯಾಗುವ ವಿಶೇಷ ಪೂಜೆಯಂತೂ ಬಹಳ ವಿಜೃಂಭಣೆಯಿಂದ ಕೂಡಿರುತ್ತದೆ. ಹುಬ್ಬಳ್ಳಿ ನಗರದ ಹೊಸ ಗಬ್ಬೂರ ಕ್ರಾಸ್ ಬಳಿ ಇರುವ ಗಾಳಿ ದುರ್ಗಮ್ಮ ದೇವಸ್ಥಾನದಲ್ಲಿ ಕೂಡ ಲೋಕಕಲ್ಯಾಣ ಅರ್ಥ ಗಣ ಹೋಮ, ಚಂಡಿಕಾ ಹೋಮ, ರುದ್ರ ಹೋಮ, ದುರ್ಗಾ ಹೋಮ ಸೇರಿದಂತೆ ವಿವಿಧ ಹೋಮಗಳನ್ನು ಬೆಳಿಗ್ಗೆಯಿಂದ ಆರಂಭಿಸಿ ಸಾಯಂಕಾಲದವರೆಗೆ ಮಾಡುವುದು ವಿಶೇಷವಾಗಿದೆ.

ಈ ದೇವಾಲಯದಲ್ಲಿ ಪ್ರತಿ ವರ್ಷ ಪುರಾಣ ಹೇಳುವ ಪದ್ಧತಿಯಿದ್ದು, ಆಡಳಿತ ಮಂಡಳಿಯವರು ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ನವದುರ್ಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ‌ ಸಲ್ಲಿಸುತ್ತಿದ್ದಾರೆ. ಈ ವರ್ಷ ಪ್ರತಿದಿನ ಒಬ್ಬರಂತೆ ದೇವತೆಗಳನ್ನು ಪ್ರತಿಷ್ಠಾಪನೆ ಮಾಡುವುದರ ಜೊತೆಗೆ ಪ್ರತಿ ದಿನವೂ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ ಮತ್ತು ದೇವಿಗೆ ಸೀಮಿತವಾದ ಮಂತ್ರಗಳನ್ನು ಪಠಿಸುತ್ತಾರೆ. ಈ ಆಚರಣೆ ದೈವೀ ಶಕ್ತಿಯ ದ್ಯೋತಕವೆಂದೇ ಭಾವಿಸಿ ಭಿನ್ನ ರೂಪಗಳಲ್ಲಿ ದುರ್ಗಾ ಮಾತೆಯನ್ನು ಆರಾಧಿಸುವುದರಿಂದ ಆಕೆ ಭಕ್ತರಲ್ಲಿ ಶಕ್ತಿ ತುಂಬುತ್ತಾಳೆ ಎಂಬ ನಂಬಿಕೆ ಕೂಡ ಭಕ್ತರಿಗಿದೆ.

For All Latest Updates

ABOUT THE AUTHOR

...view details