ಹುಬ್ಬಳ್ಳಿ: ಕೊರೊನಾ ವೈರಸ್ ಹಿನ್ನಲೆಯಲ್ಲಿ ಜಿಲ್ಲೆಯ ಆರಾಧ್ಯ ದೈವ ಸಿದ್ದಾರೂಢ ಮಠದಲ್ಲಿ ಕೂಡ ಸ್ವಾಮಿಯ ದರ್ಶನ ಹಾಗೂ ಅನ್ನ ದಾಸೋಹವನ್ನು ಮಾ.31ರ ವರೆಗೆ ಸ್ಥಗಿತಗೊಳಿಸಲಾಗಿದೆ.
ಕೊರೊನಾ ವೈರಸ್ : ಸಿದ್ದಾರೂಢ ಮಠದಲ್ಲಿ ಸ್ವಾಮಿ ದರ್ಶನ, ಅನ್ನ ದಾಸೋಹ ಸ್ಥಗಿತ - Darshana and Anna Dasoha breakdown
ಸಿದ್ದಾರೂಢ ಮಠದಲ್ಲಿ ಸ್ವಾಮಿಯ ದರ್ಶನ ಹಾಗೂ ಅನ್ನ ದಾಸೋಹ ಮಾ.31ರ ವರೆಗೆ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ.
ಸಿದ್ದಾರೂಢ ಮಠ
ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಸಿದ್ದಾರೂಢ ಮಠಕ್ಕೆ ಭಕ್ತಾಧಿಗಳ ಪ್ರವೇಶ, ವಾಸ್ತವ್ಯ ಹಾಗೂ ಅನ್ನ ದಾಸೋಹವನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿದ್ದಾರೂಢ ಟ್ರಸ್ಟ್ ಕಮಿಟಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.