ಹುಬ್ಬಳ್ಳಿ:ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಒಡೆಯ ಚಲನಚಿತ್ರ ದೇಶಾದ್ಯಂತ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಂದು ಡಿ ಬಾಸ್ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಒಡೆಯ ಚಿತ್ರ ವೀಕ್ಷಿಸಿದರು.
ಹುಬ್ಬಳ್ಳಿಯಲ್ಲಿ 'ಒಡೆಯ'ನಿಗೆ ಭರ್ಜರಿ ಓಪನಿಂಗ್... ದರ್ಶನ್ ಅಭಿಮಾನಿಗಳ ಸಂಭ್ರಮ - ಒಡೆಯ ಚಿತ್ರ ಬಿಡುಗಡೆ
ಒಡೆಯ ಚಲನಚಿತ್ರ ದೇಶಾದ್ಯಂತ ಬಿಡುಗಡೆಗೊಂಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿಂದು ಡಿ ಬಾಸ್ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡುವ ಮೂಲಕ ಒಡೆಯ ಚಿತ್ರ ವೀಕ್ಷಿಸಿದರು.
ಒಡೆಯ ಸಿನಿಮಾ ಬಿಡುಗಡೆ
ಬೆಳಿಗ್ಗೆಯಿಂದಲೇ ಅಪ್ಸರಾ ಚಿತ್ರಮಂದಿರದ ಮುಂದೆ ಜಮಾಯಿಸಿದ ಸಾವಿರಾರು ದರ್ಶನ್ ಅಭಿಮಾನಿಗಳು, ಬಾಸ್ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಇದೇ ವೇಳೆ ದರ್ಶನ್ ಭಾವಚಿತ್ರಕ್ಕೆ ಕ್ಷೀರಾಭೀಷೆಕ ಮಾಡಿ ಹೂವಿನ ಹಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹು-ಧಾ ಮಹಾನಗರದ ಬಹುತೇಕ ಚಿತ್ರಮಂದಿರಗಳಲ್ಲಿ ದರ್ಶನ್ ಕಟೌಟ್, ಬ್ಯಾನರ್ ರಾರಾಜಿಸುತ್ತಿದ್ದು, ಚಿತ್ರ ನೂರು ದಿನ ಪೂರೈಸಲಿ ಎಂದು ಅಭಿಮಾನಿಗಳು ಶುಭ ಹಾರೈಸಿ ಕುಣಿದ ಕುಪ್ಪಳಿಸುತ್ತಿದ್ದಾರೆ.
Last Updated : Dec 12, 2019, 3:03 PM IST