ಕರ್ನಾಟಕ

karnataka

ETV Bharat / state

ದಲಿತ ಕುಟುಂಬಕ್ಕೆ ಊರಿಂದ ಬಹಿಷ್ಕಾರ: ನ್ಯಾಯಕ್ಕಾಗಿ ಸಿಡಿದೆದ್ದು ಪ್ರೊಟೆಸ್ಟ್​​​​​​ - undefined

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ವಿಠಲಾಪುರದಲ್ಲಿನ ದಲಿತ ಮಹಿಳೆಯ ಮೇಲೆ ಸವರ್ಣಿಯರು ದೌರ್ಜನ್ಯ ನಡೆಸಿ, ಆ ಕುಟುಂಬವನ್ನು ಊರಿನಿಂದ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ.

ದಲಿತ ಕುಟುಂಬಕ್ಕೆ ಊರಿಂದ ಬಹಿಷ್ಕಾರ

By

Published : Jun 25, 2019, 2:01 PM IST

ಧಾರವಾಡ:ಕಳೆದ ಕೆಲವು ತಿಂಗಳುಗಳ ಹಿಂದೆ ಜಿಲ್ಲೆಯ ಕುಂದಗೋಳ ತಾಲೂಕಿನ ವಿಠಲಾಪುರದಲ್ಲಿನ ದಲಿತ ಮಹಿಳೆಯ ಮೇಲೆ ಸವರ್ಣಿಯರು ದೌರ್ಜನ್ಯ ಮಾಡಿ, ಅವರ ಕುಟುಂಬವನ್ನ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.

ಲಕ್ಷ್ಮವ್ವ ಹರಿಜನ ಎಂಬ ಮಹಿಳೆ ಕಳೆದ 4-5 ತಿಂಗಳ ಹಿಂದೆ ಗ್ರಾಮದಲ್ಲಿನ ತಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ರು. ಆದ್ರೆ ಅಲ್ಲಿಯ ಸವರ್ಣಿಯ ಗ್ರಾಮಸ್ಥರು ಆ ಮನೆ ಕೆಡವಿ ಅವರನ್ನು ಗ್ರಾಮದಿಂದ ಹೊರ ಹಾಕಿದ್ದಾರೆ. ಈ ಕುರಿತು ನೊಂದ ಕುಟುಂಬ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ದಲಿತ ಕುಟುಂಬಕ್ಕೆ ಊರಿಂದ ಬಹಿಷ್ಕಾರ

ಈ ಘಟನೆ ಬಳಿಕ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದ್ರೀಗ ನಾಲ್ಕು ತಿಂಗಳಾದರೂ ಲಕ್ಷ್ಮವ್ವ ಹರಿಜನರಿಗೆ ಇನ್ನು ಅಲ್ಲಿನ ಸವರ್ಣಿಯರು ಕೊಡುವ ಕಿರುಕಳ ಮಾತ್ರ ತಪ್ಪಿಲ್ಲ ಎಂದು ಲಕ್ಷ್ಮವ್ವ ಹರಿಜನ ಹಾಗೂ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಇದೇ ವೇಳೆ, ದಲಿತಪರ ಸಂಘಟನೆ ಮುಖಂಡರು‌ ಮಾತನಾಡಿ, ಇನ್ನಾದರೂ ಈ ಕುಟುಂಬಕ್ಕೆ ನ್ಯಾಯ ದೊರಕದಿದ್ದರೇ, ಕಾನೂನಿನ ಪ್ರಕಾರ ನಾವು ಜಿಲ್ಲಾಧಿಕಾರಿಗಳ ಮೇಲೆ ದೂರು ದಾಖಲು ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details