ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆಯಿಂದ ದೈನಿಕ, ಮಾಸಿಕ ಬಸ್ ಪಾಸ್‌ಗೆ ರಿಯಾಯಿತಿ - H. Ramanaguda

ನಿತ್ಯವೂ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ವತಿಯಿಂದ ರಿಯಾಯಿತಿ ದರದಲ್ಲಿ ದಿನದ ಮತ್ತು ಮಾಸಿಕ ಬಸ್ ಪಾಸ್​ಗಳನ್ನು ವಿತರಿಸಲಾಗುತ್ತಿದೆ.

transport agency
ಸಾರಿಗೆ ಸಂಸ್ಥೆಯಿಂದ ರಿಯಾಯಿತಿ ಬಸ್ ಪಾಸ್

By

Published : Sep 12, 2020, 8:28 PM IST

ಹುಬ್ಬಳ್ಳಿ:ಉದ್ಯೋಗ, ವಾಣಿಜ್ಯ, ಶೈಕ್ಷಣಿಕ, ಮತ್ತಿತರ ಕಾರ್ಯ ನಿಮಿತ್ತ ಮೇಲಿಂದ ಮೇಲೆ ಮತ್ತು ತಿಂಗಳುಗಟ್ಟಲೇ ನಿತ್ಯವೂ ಬಸ್ಸುಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ವತಿಯಿಂದ ರಿಯಾಯಿತಿ ದರದಲ್ಲಿ ದಿನದ ಮತ್ತು ಮಾಸಿಕ ಬಸ್ ಪಾಸ್​ಗಳನ್ನು ವಿತರಿಸಲಾಗುತ್ತದೆ.

ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಿಗೆ ನಿಗದಿಪಡಿಸಲಾಗಿರುವ ಪ್ರಯಾಣ ದರ ರಿಯಾಯಿತಿ ಬಸ್​ ಪಾಸ್ ದರ ಹಾಗೂ ಉಳಿತಾಯ ಮೊತ್ತದ ವಿವರಗಳು ಈ ರೀತಿ‌‌ ಇವೆ.

ಸಾಮಾನ್ಯ ಸಾರಿಗೆ ಬಸ್ಸುಗಳಲ್ಲಿ ನಿಗದಿಪಡಿಸಿರುವ ಮಾಸಿಕ ಪಾಸ್​ ದರ

ರಿಯಾಯಿತಿ ಪಾಸುಗಳ ಬಳಕೆಯಿಂದ ಪ್ರಯಾಣ ದರದಲ್ಲಿ ಬಹಳಷ್ಟು ಹಣ ಉಳಿತಾಯವಾಗಲಿದೆ. ಪ್ರತಿ ಸಲ ಪ್ರಯಾಣದ ಸಮಯದಲ್ಲಿ ನಗದು ಹಣ ತೆಗೆದುಕೊಂಡು ಹೋಗುವುದನ್ನು ಮತ್ತು ನಿಗದಿತ ಮೊತ್ತ ನೀಡುವಲ್ಲಿ ಎದುರಾಗುವ ಚಿಲ್ಲರೆ ಸಮಸ್ಯೆ ಬಗೆಹರಿಯಲಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.

For All Latest Updates

ABOUT THE AUTHOR

...view details