ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಗಲಭೆ ತನಿಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು: ಡಿಕೆಶಿ - ಹುಬ್ಬಳ್ಳಿ ಗಲಭೆ ಕುರಿತು ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ

ಗಲಭೆಯ ತನಿಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದೆಂದು ಸಲಹೆ ನೀಡಿದ ಡಿ.ಕೆ.ಶಿವಕುಮಾರ್, ಅಶಾಂತಿ ಮೂಡಿಸಲು ಪ್ರಚೋದನೆ ಮಾಡಬಾರದು. ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಶಾಂತಿ ಬಯಸುತ್ತದೆ ಎಂದರು.

ಡಿ. ಕೆ ಶಿವಕುಮಾರ್
ಡಿ. ಕೆ ಶಿವಕುಮಾರ್

By

Published : Apr 19, 2022, 10:24 PM IST

ಹುಬ್ಬಳ್ಳಿ:ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂತ್ರಿಗಳು, ಶಾಸಕರು ಹೇಳಿಕೆ ನೀಡುವ ಮೂಲಕ ಮುಖ್ಯ ಆರೋಪಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೈಗೊಳ್ಳುವ ತನಿಖೆಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ. ಅಲ್ಲದೇ ಜನರಿಗೂ ಕೂಡಾ ತಿಳುವಳಿಕೆ ನೀಡುತ್ತೇವೆ. ಆದರೆ ಕಾನೂನು ಕೈಗೆತ್ತಿಕೊಂಡವರಿಗೆ ರಕ್ಷಣೆ ಕೊಡುವುದಿಲ್ಲ ಎಂದು ಡಿಕೆಶಿ ಹೇಳಿದರು.


ಗಲಭೆಯ ತನಿಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದೆಂದು ಸಲಹೆ ನೀಡಿದ ಡಿ.ಕೆ.ಶಿವಕುಮಾರ್, ಅಶಾಂತಿ ಮೂಡಿಸಲು ಪ್ರಚೋದನೆ ಮಾಡಬಾರದು. ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಶಾಂತಿ ಬಯಸುತ್ತದೆ. ಉದ್ಯೋಗ ಹೆಚ್ಚಬೇಕೆಂದು ಆಶಿಸುತ್ತದೆ. ಈಗಾಗಲೇ ನಿರುದ್ಯೋಗ ಹೆಚ್ಚಿದೆ. ಮುಂದೆ ಇನ್ನೂ ಹೆಚ್ಚಾಗುವ ಆತಂಕ ಇದೆ ಎಂದರು.

ಇದನ್ನೂಓದಿ:ಹುಬ್ಬಳ್ಳಿ ಗಲಭೆ : ಕಲಬುರಗಿ ಸೆಂಟ್ರಲ್​ ಜೈಲಿಗೆ 103 ಬಂಧಿತ ಆರೋಪಿಗಳ​ ಸ್ಥಳಾಂತರ

For All Latest Updates

ABOUT THE AUTHOR

...view details