ಕರ್ನಾಟಕ

karnataka

ETV Bharat / state

ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸೋಂಕಿತ ಪರದಾಟ: ಡಿಸಿ ಖಡಕ್​​ ವಾರ್ನಿಂಗ್​

ಧಾರವಾಡ ಜಿಲ್ಲೆಯ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದೆ ನರಳಾಡಿದ್ದಾರೆ.

District Collector Nitesh Patil
ಜಿಲ್ಲಾಧಿಕಾರಿ ನಿತೇಶ್​​ ಪಾಟೀಲ್

By

Published : Jul 7, 2020, 5:08 PM IST

ಧಾರವಾಡ: ಜಿಲ್ಲೆಯ ವಿವೇಕಾನಂದ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತ ವ್ಯಕ್ತಿ ಪರದಾಡಿದ್ದು, ಕೂಡಲೇ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್​​ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನಿತೇಶ್​​ ಪಾಟೀಲ್
ಈ‌ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿರುವ ಅವರು, ವಿವೇಕಾನಂದ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿತ್ತು. ಆದರೆ ವೈದ್ಯರು ಸೋಂಕಿತ ವ್ಯಕ್ತಿಯನ್ನು ಕಿಮ್ಸ್​ ಆಸ್ಪತ್ರೆಗೆ ಕಳುಹಿಸಿದ್ದು, ಈ ವೇಳೆ ಆಸ್ಪತ್ರೆಯ ಆವರಣದಲ್ಲಿ ರೋಗಿ ನರಳಿದ್ದಾನೆ. ತದನಂತರ ಆತನನ್ನು ಕಿಮ್ಸ್​​​ನಲ್ಲಿಯೇ ದಾಖಲಿಸಲಾಗಿದೆ ಎಂದರು. ರೋಗಿಗೆ ಕೋವಿಡ್​ ದೃಢವಾದ ಬಳಿಕ ಆಸ್ಪತ್ರೆಯಿಂದ ಈ ರೀತಿ ಮಾಡಿದ್ದು, ಹೀಗಾಗಿ ವಿವೇಕಾನಂದ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ABOUT THE AUTHOR

...view details