ಧಾರವಾಡ:ಕೋವಿಡ್-19 ಕರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಸಾರ್ವಜನಿಕ ಹಿತದೃಷ್ಟಿಯಿಂದ ಸಿಆರ್ಪಿಸಿ 1973 ಕಲಂ 144(3) ಅಡಿ ಜಿಲ್ಲೆಯಾದ್ಯಂತ ಮಾರ್ಚ್ 21 ರವರೆಗೆ ಸಂತೆ, ಜಾತ್ರೆ, ಮೆರವಣಿಗೆ, ಸಮಾವೇಶ, ಸಮ್ಮೇಳನ, ಕ್ರೀಡಾಕೂಟ ಹಾಗೂ ಎಲ್ಲಾ ಧಾರ್ಮಿಕ ಸಮಾರಂಭಗಳನ್ನು ಪ್ರತಿಬಂಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಸ್ನೇಹ ಸಮ್ಮೇಳನ, ನಾಟಕೋತ್ಸವ, ಸಂಗೀತ ಸಮ್ಮೇಳನ, ವಿಚಾರಗೋಷ್ಠಿ ಮುಂತಾದ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಕಿಮ್ಸ್ ಗೆ ಡಿಸಿ ದೀಪಾ ಚೋಳನ್ ಭೇಟಿ...
ಕೋವಿಡ್-19 ಕೊರೋನಾ ವೈರಸ್ ಚಿಕಿತ್ಸೆಗೆ ಮುಂಜಾಗೃತ ಕ್ರಮವಾಗಿ, ಹುಬ್ಬಳ್ಳಿ ಕಿಮ್ಸ್ನಲ್ಲಿ ಕೈಗೊಳ್ಳಲಾಗಿರುವ ಸಿದ್ದತೆಗಳನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿ ಪರಿಶೀಲಿಸಿದರು.
ಸದ್ಯ ಇರುವ ಹೊರರೋಗಿಗಳ ವಿಭಾಗದ ಬಳಿ ಕೊರೊನಾ ಕ್ಲಿನಿಕ್ ಹಾಗೂ 24 ಗಂಟೆಯ ಕರ್ತವ್ಯ ನಿರತ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಸೋಂಕು ಶಂಕಿತ ಪ್ರಕರಣ ಕಂಡು ಬಂದರೆ ಕೂಡಲೇ ಅವರನ್ನು ಪ್ರತ್ಯೇಕ ವಾರ್ಡ್ಗೆ ಸ್ಥಳಾಂತರಗೊಳಿಸಲಾಗುವುದು. ಶಂಕಿತ ವ್ಯಕ್ತಿಯ ಸೋಂಕು ಪರೀಕ್ಷೆ ನಡೆಸಲಿದ್ದು, ತಜ್ಞ ವೈದ್ಯರ ತಂಡ ರೋಗಿಯ ಮೇಲೆ ನಿಗಾ ಇಟ್ಟು ಚಿಕಿತ್ಸೆ ನೀಡಲಿದ್ದಾರೆ.