ಹುಬ್ಬಳ್ಳಿ :ಲಾಕ್ಡೌನ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಆಗಿರುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಬೈಕ್, ಕಾರ್ ಬಿಟ್ಟು ಈಗ ಸೈಕಲ್ ಕಳ್ಳತನ ಮಾಡಲು ಮುಂದಾಗಿದ್ದಾರಂತೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೈಕಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಜನರು ಮನೆಯ ಹೊರಗೆ ಸೈಕಲ್ ನಿಲ್ಲಿಸಲು ಭಯ ಪಡುತ್ತಿದ್ದಾರೆ. ಮನೆಯ ಮುಂದೆ, ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಸೈಕಲ್‌ಗಳು ಕ್ಷಣಾರ್ಧದಲ್ಲಿ ಮಂಗಮಾಯವಾಗುತ್ತಿವೆಯಂತೆ.
ನಗರದ ದೇಶಪಾಂಡೆಲೇಔಟ್, ಸಂತೋಷನಗರ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸೈಕಲ್‌ಗಳು ಕಳ್ಳತವಾಗುತ್ತಿವೆ. ಕಳೆದ ಮೂರು ತಿಂಗಳಿನಲ್ಲಿ ಸುಮಾರು ಸೈಕಲ್‌ಗಳು ಕಳ್ಳತನವಾಗಿರುವ ಕುರಿತು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಸಹ ದಾಖಲಾಗಿವೆ ಅಂತಿದಾರೆ ಸ್ಥಳೀಯರು.