ಹುಬ್ಬಳ್ಳಿ: ‘ದಿಶಾ ರೈಡ್ ಆ್ಯಂಡ್ ವಾಕ್’ ಎಂಬ ಧ್ಯೇಯದೊಂದಿಗೆ ನಗರದ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಹುಬ್ಬಳ್ಳಿಯಲ್ಲಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದ ‘ದಿಶಾ ರೈಡ್ ಆ್ಯಂಡ್ ವಾಕ್’ ರ್‍ಯಾಲಿ - 'ಹುಬ್ಬಳ್ಳಿ ಬೈಸಿಕಲ್ ಕ್ಲಬ್' ಆಶ್ರಯದಲ್ಲಿ ಆಯೋಜಿಸಿದ್ದ ಜಾಥಾ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ‘ದಿಶಾ ರೈಡ್ ಆ್ಯಂಡ್ ವಾಕ್’ ಎಂಬ ಧ್ಯೇಯದೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಹುಬ್ಬಳ್ಳಿಯಲ್ಲಿ ‘ದಿಶಾ ರೈಡ್ ಆ್ಯಂಡ್ ವಾಕ್’ ಜಾಗೃತಿ ರ್‍ಯಾಲಿ
ಮಹಿಳೆಯರಲ್ಲಿ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ 'ಹುಬ್ಬಳ್ಳಿ ಬೈಸಿಕಲ್ ಕ್ಲಬ್' ಆಶ್ರಯದಲ್ಲಿ ಆಯೋಜಿಸಿದ್ದ ಜಾಥಾಕ್ಕೆ ಪೊಲೀಸ್ ಆಯುಕ್ತ ಆರ್. ದಿಲೀಪ್ ಚಾಲನೆ ನೀಡಿದ್ರು.
ಮೂರೂವರೆ ಕಿ.ಮೀ. ದೂರದ ಸೈಕಲ್ ರೈಡಿಂಗ್ ಹಾಗೂ ಕಾಲ್ನಡಿಗೆಯಲ್ಲಿ ನೂರಾರು ಯುವತಿಯರು, ಮಹಿಳೆಯರು ಪಾಲ್ಗೊಂಡು ರ್‍ಯಾಲಿಯನ್ನುಯಶಸ್ವಿಗೊಳಿಸಿದರು.