ಕರ್ನಾಟಕ

karnataka

ETV Bharat / state

ಗ್ರಾಹಕನಿಗೆ ಬಡ್ಡಿ ಸಮೇತ ಠೇವಣಿ, ಪರಿಹಾರ ವಿತರಿಸಿ: ಕೊಆಪರೇಟಿವ್ ಸೊಸೈಟಿಗೆ ಆದೇಶ

ಹುಬ್ಬಳ್ಳಿ ಲೋಕಪ್ಪನಹಕ್ಕಳದ ನಿವಾಸಿ ಸುಮಂಗಲಾ ಕಲ್ಲವಡ್ಡರ ಅವರು ಹುಬ್ಬಳ್ಳಿ, ಹೈದರಾಬಾದ್ ಸ್ಟಾರ್ಸ್ ಮಲ್ಟಿಪರ್ಪಸ್ ಕೊಆಪರೇಟಿವ್ ಸೊಸೈಟಿಯಲ್ಲಿ 2016-2017ರ ಅವಧಿಯಲ್ಲಿ 54,000 ರೂ ಮೊತ್ತದ 6 ಮುದ್ದತ್ತು ಠೇವಣಿ ಇರಿಸಿದ್ದರು.

customer court
ಜಿಲ್ಲಾ ಗ್ರಾಹಕರ ಆಯೋಗ

By

Published : Dec 9, 2022, 6:34 PM IST

ಧಾರವಾಡ:ಕೊಆಪರೇಟಿವ್ ಸೊಸೈಟಿ ಬಡ್ಡಿಸಮೇತ 54 ಸಾವಿರ ರೂ ಠೇವಣಿಯ ಜತೆಗೆ 25,000 ರೂ ಪರಿಹಾರ ಹಾಗೂ 10 ಸಾವಿರ ರೂ ಪ್ರಕರಣದ ಖರ್ಚನ್ನು ಗ್ರಾಹಕನಿಗೆ ಕೊಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿತು. ಹುಬ್ಬಳ್ಳಿ ಲೋಕಪ್ಪನಹಕ್ಕಳದ ನಿವಾಸಿ ಸುಮಂಗಲಾ ಕಲ್ಲವಡ್ಡರ ಅವರು ಹುಬ್ಬಳ್ಳಿ, ಹೈದರಾಬಾದ್ ಸ್ಟಾರ್ಸ್ ಮಲ್ಟಿಪರ್ಪಸ್ ಕೊಆಪರೇಟಿವ್ ಸೊಸೈಟಿಯಲ್ಲಿ 2016-2017ರ ಅವಧಿಯಲ್ಲಿ 54,000 ರೂ ಮೊತ್ತದ 6 ಮುದ್ದತ್ತು ಠೇವಣಿ ಇರಿಸಿದ್ದರು.

ಈ ಠೇವಣಿ ಅವಧಿ 2021ಕ್ಕೆ ಮುಕ್ತಾಯವಾಗಿದ್ದರೂ ತನ್ನ ಠೇವಣಿ ಹಣವನ್ನು ಸೊಸೈಟಿಯವರು ಕೊಡುತ್ತಿಲ್ಲ. ಸೊಸೈಟಿಯವರ ವರ್ತನೆ ಸೇವಾ ನ್ಯೂನತೆ ಎಂದು ಹೇಳಿ ಸೊಸೈಟಿ ವಿರುದ್ಧ ಕ್ರಮ ಕೈಗೊಂಡು ತನ್ನ ಠೇವಣಿ ಹಣ ಮರುಪಾವತಿಸುವಂತೆ, ತೊಂದರೆ ಮತ್ತು ಮಾನಸಿಕ ಹಿಂಸೆಗೆ ಈ ಪ್ರಕರಣದ ಖರ್ಚುವೆಚ್ಚ ಸಮೇತ ಪರಿಹಾರ ಕೊಡಿಸಬೇಕು ಎಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷೆ ವಿ.ಅ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಸದಸ್ಯರು, ದೂರುದಾರರು ಸೊಸೈಟಿ ಸದಸ್ಯರಿದ್ದರೂ ಅವರಿಂದ ಠೇವಣಿ ರೂಪದಲ್ಲಿ ಪಡೆದ ಹಣವನ್ನು ಸಹಕಾರ ಸಂಘದವರು ತಮ್ಮ ಸಂಘದ ಅಭಿವೃದ್ಧಿಗೆ ಉಪಯೋಗಿಸಿಕೊಂಡಿದ್ದು ದೂರುದಾರರು ಗ್ರಾಹಕರಾಗುತ್ತಾರೆ. ದೂರುದಾರರು ಸೇವೆ ನೀಡುವ ಅರ್ಥವಿವರಣೆಯಲ್ಲಿ ಬರುತ್ತಾರೆ ಎಂದು ಅಭಿಪ್ರಾಯಪಟ್ಟು ಆ ಬಗ್ಗೆ ಠೇವಣಿ ಅವಧಿ ಮುಗಿದರೂ ದೂರುದಾರರ ಠೇವಣಿ ಹಣ ಹಿಂದಿರುಗಿಸದಿರುವುದು ಸೇವಾ ನ್ಯೂನತೆ ತೋರಿಸುತ್ತದೆ ಎಂದು ಆಯೋಗ ತೀರ್ಪು ನೀಡಿತು.

ಹಾಗಾಗಿ, ಠೇವಣಿ ಇಟ್ಟ ದಿನಾಂಕದಿಂದ ಶೇ 10ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಠೇವಣಿ ಹಣ 54,000 ರೂ ಅನ್ನು ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ. ಸೇವಾ ನ್ಯೂನತೆ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 25,000 ರೂ ಪರಿಹಾರ ಹಾಗೂ 10,000 ರೂ ಪ್ರಕರಣದ ಖರ್ಚು ವೆಚ್ಚ ನೀಡಲು ಸೂಚಿಸಲಾಗಿದೆ.

ಇದನ್ನೂಓದಿ:ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕರ ಸುಲಿಗೆ: ಮಾಧ್ಯಮದವರನ್ನು ಕಂಡು ಓಟ!

ABOUT THE AUTHOR

...view details