ಹುಬ್ಬಳ್ಳಿ: ಈರುಳ್ಳಿ ಹಾಗೂ ಮೆಣಸಿನಕಾಯಿ ಹೊಲದಲ್ಲಿ ಬೆಳೆದಿದ್ದ ಗಾಂಜಾವನ್ನು ಜಿಲ್ಲೆಯ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ: ಈರುಳ್ಳಿ-ಮೆಣಸಿನಕಾಯಿ ಹೊಲದಲ್ಲಿ ಗಾಂಜಾ ಬೆಳೆ..! ಆರೋಪಿ ಸೆರೆ... - ಎನ್ ಡಿಪಿಎಸ್ ಕಾಯ್ದೆ
ಈರುಳ್ಳಿ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಈರುಳ್ಳಿ-ಮೆಣಸಿನಕಾಯಿ ಹೊಲದಲ್ಲಿ ಗಾಂಜಾ ಬೆಳೆ
ಕುಸಗಲ್ ಗ್ರಾಮದ ಚಂದ್ರು ಕಾಶೀನಾಥ ಬನ್ನಿಕೊಪ್ಪ (30) ಎಂಬಾತ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಂದ ಜಮೀನನ್ನು ಲೀಸ್ಗೆ ಪಡೆದು ಈರುಳ್ಳಿ ನಡುವೆ ಗಾಂಜಾ ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ರಮೇಶ ಗೋಕಾಕ್ ತಂಡ ದಾಳಿ ನಡೆಸಿ 18.4 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮೀಣ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು,ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.