ಹುಬ್ಬಳ್ಳಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಕಿಮ್ಸ್ನ ಕೊರೊನಾ ಐಸಿಯು ವಾರ್ಡ್ ಈಗ ಅವ್ಯವಸ್ಥೆಯ ಆಗರವಾಗಿದೆ.
ಕೊರೊನಾ ಐಸಿಯು ವಾರ್ಡ್ ಅಂದ್ರೆ ಅಲ್ಲಿ ಯಾರೂ ಕೂಡ ಹೋಗಬಾರದು. ವೈದ್ಯರು, ನರ್ಸ್ಗಳು ಕೂಡ ಪಿಪಿಇ ಕಿಟ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಆದ್ರೆ ಕಿಮ್ಸ್ನ ಕೊರೊನಾ ಐಸಿಯು ವಾರ್ಡ್ ಯಾವುದೋ ಮದುವೆ ಛತ್ರದಂತೆ ಕಾಣುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಕೊರೊನಾ ಐಸಿಯು ವಾರ್ಡ್ನದ್ದು ಎನ್ನಲಾದ ವಿಡಿಯೋದಲ್ಲಿ ಕೊರೊನಾ ಸೋಂಕಿತರ ಪಕ್ಕದಲ್ಲಿ ಅಟೆಂಡರ್ಸ್ ಹಾಗೂ ಸಂಬಂಧಿಗಳು ಮಲಗಿರುವ ದೃಶ್ಯ ಎಂಥವರನ್ನು ಭಯಭೀತಗೊಳಿಸುತ್ತದೆ. ಸೋಂಕಿತ ಅಂತಾ ಕೂಡ ನೋಡದೆ ರೋಗಿಯ ಜೊತೆ ಒಂದೇ ಬೆಡ್‌ನಲ್ಲಿ ಅಟೆಂಡರ್ ಹಾಗೂ ಸಂಬಂಧಿಗಳು ಮಲಗುತ್ತಾರೆ. ಕಾಟ್ ಖಾಲಿ ಇರದಿದ್ರೆ ಸಂಬಂಧಿಗಳು ನೆಲದ ಮೇಲೆ ಹಾಸಿಗೆ ಹಾಸಿಕೊಂಡೇ ನಿರ್ಭಯವಾಗಿ ಮಲಗುತ್ತಾರೆ.