ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದಲ್ಲಿರುವ ಸೆಂಟ್ರಲ್ ಮಾಲ್ ವಾಣಿಜ್ಯ ಮಳಿಗೆ ಕಟ್ಟಡವನ್ನ ಹರಾಜು ಹಾಕುವುದಾಗಿ ಕೆಎಸ್ಎಫ್ಸಿಯಿಂದ ಜಾಹೀರಾತು ನೀಡಲಾಗಿತ್ತು. ಈ ಜಾಹೀರಾತನ್ನು ನೋಡಿದ 200ಕ್ಕೂ ಹೆಚ್ಚು ಜನರು ಇದೀಗ ಬೀದಿಗೆ ಬಂದಿದ್ದಾರೆ. ಇವರೆಲ್ಲರು 2010-12 ರಲ್ಲಿ ಸೆಂಟ್ರಲ್ ಮಾಲ್ ವಾಣಿಜ್ಯ ಮಳಿಗೆ ಕಟ್ಟಡದ ಮಾಲೀಕ ವಿಜಯ ಕಬಾಡೆ ಬೀಸಿದ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ.
ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿ ಕೊಡುವುದಾಗಿ ಹೇಳಿ ವಿಜಯ ಕಬಾಡೆ ಅಂದು ಎರಡು ನೂರು ರೂಪಾಯಿ ಬಾಂಡ್ ಮೇಲೆ ಒಪ್ಪಂದ ಮಾಡಿಕೊಂಡು ಹಣ ವಸೂಲಿ ಮಾಡಿದ್ದರು. 200ಕ್ಕೂ ಹೆಚ್ಚು ಜನರಿಂದ 20 ಕೋಟಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದರು. ಇನ್ನು ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇನ್ಸ್ಟಾಲ್ ಮೆಂಟ್ ಮೇಲೆ ಆತ ಜನರಿಂದ ಹಣ ವಸೂಲಿ ಮಾಡಿದ್ದ. ಆದ್ರೆ ಇವತ್ತಿಗೂ ಹಣ ಕೊಟ್ಟವರಿಗೆ ವಾಣಿಜ್ಯ ಮಳಿಗೆಗಳನ್ನ ಕಟ್ಟಿಸಿಕೊಟ್ಟಿಲ್ಲ. ಆದ್ರೆ ಆ ಮಳಿಗೆಗಳೇ ಇಂದು ಹರಾಜಿಗೆ ಬಂದಿರುವುದರಿಂದ ಹಣ ಕಟ್ಟಿದವರು ಈಗ ಶಾಕ್ ಆಗಿದ್ದಾರೆ.