ಹುಬ್ಬಳ್ಳಿ: ಜಿಲ್ಲೆ ಸೇರಿದಂತೆ ಕುಂದಗೋಳ ತಾಲೂಕಿನಲ್ಲಿ ಅತಿ ವೃಷ್ಟಿಯಿಂದ ಮುಂಗಾರು ಬೆಳೆಗಳು ಹಾನಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬಳೆಗಳಿಗೆ ತಕ್ಕ ಪರಿಹಾರ ಘೋಷಣೆ' ಮಾಡಬೇಕು ಎಂದು ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘದ ಮನವಿ - hubballi latest news
ಅತೀ ವೃಷ್ಟಿಯಿಂದ ಮುಂಗಾರು ಬೆಳೆ ನಾಶವಾಗಿದ್ದು, ಸರ್ಕಾರ ರೈತ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿ ಕುಂದಗೋಳ ತಹಶೀಲ್ದಾರ್ ಮೂಲಕ ಸಿಎಂಗೆ ಮನವಿ ಮಾಡಿದರು.
![ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘದ ಮನವಿ Crops destroyed due to heavy rain fall](https://etvbharatimages.akamaized.net/etvbharat/prod-images/768-512-8824238-139-8824238-1600258340121.jpg)
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘದ ಮನವಿ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘದ ಮನವಿ
ಕುಂದಗೋಳ ತಾಲೂಕಿನ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಕೊರೊನಾದಿಂದ ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲಿ ಮಳೆ ಅವಾಂತರ ಆರಂಭವಾಗಿದೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಹೆಸರು, ಶೆಂಗಾ, ಕಡಲೆಕಾಯಿ, ಹಲಸಂದಿ ಸೇರಿದಂತೆ ಹಲವು ಬೆಳೆಗಳಿಗೆ ನಿರ್ದಿಷ್ಟ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಸೋಮರಾವ್ ದೇಸಾಯಿ, ಕಿಸಾನ ಘಟಕದ ಅಧ್ಯಕ್ಷ ಗಂಗಪ್ಪ ಪಾಣಿಘಟ್ಟಿ ನಾಗಾರಾಜ ದೇಶಪಾಂಡೆ , ಸಿದ್ದಪ್ಪ ಇಂಗಹಳ್ಳಿ ಇದ್ದರು.