ಧಾರವಾಡ :ಜಿಲ್ಲೆಯ ಅಳ್ನಾವರದ ಹಿರೇಕೆರೆ ದಡದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಕಾಶೇನಟ್ಟಿ ಗ್ರಾಮದ ಆಶ್ರಯ ಕಾಲೋನಿ, ಎಂಸಿ ಪ್ಲಾಟ್ ಜನ ಸಂಚರಿಸುವ ರಸ್ತೆಯ ಬಳಿ ಇರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ.
ಅಳ್ನಾವರ ಹಿರೇಕೆರಿಯಲ್ಲಿ ಮೊಸಳೆ ಪ್ರತ್ಯಕ್ಷ : ಆತಂಕದಲ್ಲಿ ಜನರು - ಧಾರವಾಡದ ಅಳ್ನಾವರ ಹಿರೇಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ
ನಿತ್ಯ ನೂರಾರು ಜನ ಓಡಾಡುವ ರಸ್ತೆಯ ಪಕ್ಕದಲ್ಲಿರುವ ಕೆರೆ ಇದಾಗಿದ್ದು, ಕೆರೆಯಲ್ಲಿ ನೀರು ಹೆಚ್ಚಿರುವ ಕಾರಣ ಮೊಸಳೆ ಸೆರೆ ಹಿಡಿಯಲು ಅಡ್ಡಿಯಾಗಿದೆ..
ಮೊಸಳೆ ಪ್ರತ್ಯಕ್ಷ
ನಿತ್ಯ ನೂರಾರು ಜನ ಓಡಾಡುವ ರಸ್ತೆಯ ಪಕ್ಕದಲ್ಲಿರುವ ಕೆರೆ ಇದಾಗಿದ್ದು, ಕೆರೆಯಲ್ಲಿ ನೀರು ಹೆಚ್ಚಿರುವ ಕಾರಣ ಮೊಸಳೆ ಸೆರೆ ಹಿಡಿಯಲು ಅಡ್ಡಿಯಾಗಿದೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಕಾಲೇಜ್‌ವೊಂದಕ್ಕೆ ಮೊಸಳೆ ನುಗ್ಗಿ ಆತಂಕ ಸೃಷ್ಟಿ ಮಾಡಿತ್ತು. ಈ ಹಿನ್ನೆಲೆ ಇದೀಗ ಮತ್ತೆ ಜನರಲ್ಲಿ ಆತಂಕ ಹೆಚ್ಚಾಗಿದೆ.