ಕರ್ನಾಟಕ

karnataka

ETV Bharat / state

ಗಾಂಜಾ ಮತ್ತಲ್ಲಿ ಬೀಳುತ್ತಿವೆಯಾ ಹೆಣಗಳು? ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ರಂಪಾಟ - ಗಾಂಜಾ ಪತ್ತೆ

ಹುಬ್ಬಳ್ಳಿಯಲ್ಲಿ ಗಾಂಜಾ ಮತ್ತಿನಲ್ಲಿ ಅಪರಾಧ ಕೃತ್ಯಗಳು ಅಧಿಕವಾಗುತ್ತಿವೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿಗೆ ಅಪರಾಧ ಕೃತ್ಯಗಳಲ್ಲಿ ಯುವಕರೇ ಹೆಚ್ಚಾಗಿ ತೊಡಗುತ್ತಿದ್ದು, ಈ ಕೃತ್ಯಗಳಲ್ಲಿ ಗಾಂಜಾ ಬಳಕೆ ಮಾಡಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

crime-rate-increased-in-hubballi-leads-doubt-about-consumption-of-marijuana
ಅಮಲಿನಲ್ಲಿ ಮಚ್ಚು ಬೀಸುತ್ತಿದ್ದಾರಾ ಹುಬ್ಬಳ್ಳಿ ಪುಡಿ ರೌಡಿಗಳು..?

By

Published : Jul 18, 2021, 3:59 PM IST

Updated : Jul 18, 2021, 6:36 PM IST

ಹುಬ್ಬಳ್ಳಿ:ನಗರದಲ್ಲಿ ಇತ್ತೀಚೆಗೆ ಸಂಭವಿಸಿರುವ ಕೊಲೆಗಳ ಹಿಂದೆ ಗಾಂಜಾ ಘಾಟು ಸದ್ದು ಮತನಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಯುವಕರ ಕೊಲೆ ಪ್ರಕರಣಗಳನ್ನು ಅವಲೋಕಿಸಿದಾಗ ಕ್ಷುಲ್ಲಕ ಕಾರಣಕ್ಕೆ ಹದಿಹರೆಯದವರ ಕೊಲೆ ನಡೆದಿರುವುದು ಆತಂಕ ಹೆಚ್ಚಿಸಿದೆ.

ಹುಬ್ಬಳ್ಳಿಯಲ್ಲಿ ಒಂದು ಕಾಲದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರೌಡಿಗಳು ಅಪರಾಧ ಕೃತ್ಯಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಕಳೆದ 15 ದಿನಗಳೊಳಗೆ ನಡೆದಿರುವ ಎರಡು ಹತ್ಯೆಯೂ ಇಂತಹ ಸಣ್ಣ ವಿಚಾರಗಳಿಗೆ ನಡೆದಿವೆ. ಈ ಕೊಲೆಗಳ ಹಿಂದೆ ಅಂತದ್ದೇನೂ ದೊಡ್ಡ ಉದ್ದೇಶವಿರಲಿಲ್ಲ. ಕಾರಿನ ಗಾಜು ಒಡೆದ ಕಾರಣಕ್ಕಾಗಿ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯವಾಗಿತ್ತು.

ಗಾಂಜಾ ಮತ್ತಲ್ಲಿ ಬೀಳುತ್ತಿವೆಯಾ ಹೆಣಗಳು?

ಗೋಪನಕೊಪ್ಪದ ಕೊನೆ ಬಸ್ ನಿಲ್ದಾಣದಲ್ಲೇ ಯುವಕರಿಬ್ಬರ ಡಬಲ್ ಮರ್ಡರ್ ನಡೆದಿತ್ತು. ಈ ಕೊಲೆಗಳಲ್ಲಿ ಭಾಗಿಯಾಗಿದ್ದವರು ಗಾಂಜಾ ಸೇವಿಸಿದ್ದರು ಎನ್ನಲಾಗಿದೆ. ಆದರೆ ನಗರದೊಳಗೆ ಯುವಕರ ಕೈಗೆ ಹೇಗೆ ಗಾಂಜಾ ಸರಬರಾಜಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಅಲ್ಲದೆ ಗಾಂಜಾ ಮತ್ತಿನಲ್ಲಿಯೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂಬುದು ಸಾರ್ವಜನಿಕರ ಮಾತಾದರೆ, ಇದಕ್ಕೂ ಮೊದಲು ಗಾಂಜಾ ಸಂಬಂಧ ಗೃಹ ಸಚಿವ ಬೊಮ್ಮಾಯಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ಅಲರ್ಟ್ ಆಗಿದ್ದ ಪೊಲೀಸ್ ಇಲಾಖೆ ಹಲವು ಕಡೆ ದಾಳಿ ನಡೆಸಿ ಗಾಂಜಾ ಸೇರಿದಂತೆ ಮತ್ತಿತರ ವಸ್ತುಗಳ ವಶಕ್ಕೆ ಪಡೆದು ಆರೋಪಿಗಳ ಬಂಧಿಸುವ ಕಾರ್ಯ ಮಾಡಿದ್ದಾರೆ.

ಆದರೆ ಇಷ್ಟಾದರೂ ಹುಬ್ಬಳ್ಳಿಯ ಗಲ್ಲಿಯಲ್ಲಿ ಗಾಂಜಾ ಘಾಟು ಹರಡಿದ್ದು, ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟಗಾರರ ಬಂಧನ!

Last Updated : Jul 18, 2021, 6:36 PM IST

ABOUT THE AUTHOR

...view details