ಧಾರವಾಡ: ಕೇಂದ್ರ ಸರ್ಕಾರದ ವಿರುದ್ದ ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಹಳ್ಳಿ ಹಳ್ಳಿಯಲ್ಲೂ ಬಂದ್ ಬೆಂಬಲಕ್ಕೆ ಸಂಘಟಕರು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಾಳಿನ ಕರ್ನಾಟಕ ಬಂದ್ ಬೆಂಬಲಿಸುವಂತೆ ಹಳ್ಳಿ- ಹಳ್ಳಿಗಳಲ್ಲಿ ಪ್ರಚಾರ
ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಬಂದ್‌ಗೆ ಬೆಂಬಲ ನೀಡುವಂತೆ ಕೋರಿ ಧಾರವಾಡದಲ್ಲಿ ಸಂಘಟಕರು ಹಳ್ಳಿ-ಹಳ್ಳಿಗಳಿಗೆ ತೆರಳಿ ಮನವಿ ಮಾಡಿಕೊಳ್ತಿದ್ದಾರೆ.
ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬಂದ್ ಗೆ ಬೆಂಬಲ ನೀಡುವಂತೆ ಕೇಳಿಕೊಳ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಗೆ ಮಾರಕವಾಗುವಂತೆ ತರುತ್ತಿರುವ ಕಾಯ್ದೆಗಳ ಕುರಿತು ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಕೃಷಿ ಕಾರ್ಮಿಕ ಸಂಘಟನೆಯಿಂದ ಹಳ್ಳಿ -ಹಳ್ಳಿಯಲ್ಲಿ ಬಂದ್ ಬಗ್ಗೆ ಪ್ರಚಾರ ಮಾಡಿ ಜನರಿಗೆ ಬೆಂಬಲ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.. ಕರ್ನಾಟಕ ಬಂದ್ ಹಿನ್ನೆಲೆ ಬಂದ್‌ಗೆ ಧಾರವಾಡದಲ್ಲಿ ದಲಾಲ್ ಮತ್ತು ವರ್ತಕರ ಸಂಘದ ಬೆಂಬಲ ವ್ಯಕ್ತವಾಗಿದೆ. ಧಾರವಾಡ ಎಪಿಎಂಸಿಯಲ್ಲಿನ ಎಲ್ಲ ಅಂಗಡಿ, ವ್ಯಾಪಾರ ನಾಳೆ ಸಂಪೂರ್ಣ ಬಂದ್ ಮಾಡಿ ಬೆಂಬಲ ನೀಡಲಿದ್ದಾರೆ.
ವರ್ತಕರ ಸಂಘದಿಂದ ಎಪಿಎಂಸಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ನಾಳೆ ಯಾವುದೇ ಧಾನ್ಯ, ಕಾಳು ತರದಂತೆ ರೈತರಿಗೆ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಮನವಿ ಮಾಡಿಕೊಂಡಿದ್ದಾರೆ.