ಹುಬ್ಬಳ್ಳಿ:ಇಲ್ಲಿನ ಘಂಟಿಕೇರಿಯ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾಗಿರುವ ಲಕ್ಷಣ ರಹಿತ ಕೋವಿಡ್ ಸೋಂಕಿತರು ಕರೋಕೆ ರಾಗಕ್ಕೆ ಹಾಡು ಹಾಡಿ ಮನರಂಜನೆ ಪಡೆದರು.
ಘಂಟಿಕೇರಿ ಕೋವಿಡ್ ಕೇರ್ ಸೆಂಟರ್ನಲ್ಲಿ ಕರೋಕೆ ರಾಗಕ್ಕೆ ಧ್ವನಿಯಾದ ಸೋಂಕಿತರು - sing song on Karaoke
ಕೋವಿಡ್ ಸೋಂಕಿತರ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುವ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕರೋಕೆ ರಾಗಕ್ಕೆ ಹಾಡು ಹಾಡಿ ಮನರಂಜನೆ ಪಡೆದರು.
![ಘಂಟಿಕೇರಿ ಕೋವಿಡ್ ಕೇರ್ ಸೆಂಟರ್ನಲ್ಲಿ ಕರೋಕೆ ರಾಗಕ್ಕೆ ಧ್ವನಿಯಾದ ಸೋಂಕಿತರು Covid patients](https://etvbharatimages.akamaized.net/etvbharat/prod-images/768-512-8071373-thumbnail-3x2-hbl.jpg)
ಘಂಟಿಕೇರಿ ಕೋವಿಡ್ ಕೇರ್ ಸೆಂಟರ್
ಕೋವಿಡ್ ಕೇರ್ ಸೆಂಟರ್ನಲ್ಲಿ ಕರೋಕೆ ರಾಗಕ್ಕೆ ಧ್ವನಿಯಾದ ಸೋಂಕಿತರು
ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುವ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ಅವರ ಸೂಚನೆ ಮೇರೆಗೆ ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್, ಡಾ. ಸಂಪತ್ ಸಿಂಗ್ ಸೇರಿದಂತೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಶುಶ್ರೂಷಕಿಯರು ಈ ಕ್ರಮ ಕೈಗೊಂಡಿದ್ದಾರೆ.