ಧಾರವಾಡ:ರಾಜ್ಯದಲ್ಲಿ ನಾಲ್ಕು ಲಕ್ಷ ಗಡಿ ದಾಟಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಹೆಚ್ಚಾಗಿ ಪುರುಷರನ್ನು ಕಾಡಿದೆ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದ ಅಡಿಯಲ್ಲಿ ಧಾರವಾಡ ಜೆಎಸ್ಎಸ್ ಆರ್ಥಿಕ ಸಂಶೋಧನಾ ಮತ್ತು ಜನಸಂಖ್ಯಾ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ಜ್ಯೋತಿ ಹಳ್ಳದ ಅವರ ಅಧ್ಯಯನದ ವರದಿಯಿಂದ ಈ ವಿಷಯ ಬಹಿರಂಗಗೊಂಡಿದೆ.
ಕೊರೊನಾ ಸೋಂಕು ಹೆಚ್ಚು ಹರಡಿದ್ದು ಪುರುಷರಲ್ಲಿ: ವರದಿಯಿಂದ ಬಹಿರಂಗ ಮಾರ್ಚ 10ರಿಂದ ಜುಲೈ 20ರವರೆಗಿನ ಕೇಸ್ಗಳ ಮೇಲೆ ಅಧ್ಯಯನ ನಡೆಸಿರುವ ಜ್ಯೋತಿ ಹಳ್ಳದ, ರಾಜ್ಯದಲ್ಲಿ ಶೇ. 67ರಷ್ಟು ಪುರುಷರಿಗೆ ವೈರಸ್ ಕಾಡಿದ್ರೆ, 33ರಷ್ಟು ಮಹಿಳೆಯರಲ್ಲಿ ಕಂಡು ಬಂದಿದೆ. 67,420 ಕೊರೊನಾ ಕೇಸ್ಗಳ ಮೇಲೆ ಸಂಶೋಧನೆ ನಡೆಸಲಾಗಿದೆ.
ಜಿಲ್ಲಾವಾರು ಅಂಕಿ-ಅಂಶಗಳು:ಹಾವೇರಿ, ದಾವಣಗೆರೆ, ಗದಗ, ಕೊಡಗು, ಯಾದಗಿರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಹಿಳೆಯರಲ್ಲಿ ಹೆಚ್ಚು ಸೋಂಕು ಕಂಡು ಬಂದಿದೆ. ಚಿತ್ರದುರ್ಗ, ಕೊಪ್ಪಳ, ತುಮಕೂರ, ದಕ್ಷಿಣ ಕನ್ನಡ, ಮೈಸೂರು, ಬಳ್ಳಾರಿ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರಮಾಣ ಕಡಿಮೆಯಾಗಿದೆ.
ವಯೋಮಾನದ ಸರಾಸರಿ: ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಸೋಂಕು ಹರಡಿದೆ. ಯಾದಗಿರಿ, ಕಲಬುರಗಿ, ರಾಯಚೂರು, ಉತ್ತರ ಕನ್ನಡ ಮತ್ತು ಬೀದರ್ ಜಿಲ್ಲೆಗಳಲ್ಲಿ 19 ವರ್ಷದವರೆಗಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕಿನ ಹಿನ್ನೆಲೆ:
- ಶೇ. 9ರಷ್ಟು ಪ್ರಕರಣಗಳು ಮಹಾರಾಷ್ಟ್ರದಿಂದ ಮರಳಿ ಬಂದವರಲ್ಲಿ ಸೋಂಕು ಪತ್ತೆಯಾಗಿದೆ.
- ಬೇರೆ ರಾಜ್ಯದಿಂದ ಮರಳಿ ಬಂದವರ ಸಂಪರ್ಕದಿಂದ 3% ಜನರಿಗೆ ವೈರಸ್ ಕಾಡಿದೆ
- ಪಾಸಿಟಿವ್ ಸೋಂಕಿತರ ಸಂಪರ್ಕದಿಂದ 15%ರಷ್ಟು ಜನರಿಗೆ ಸೋಂಕು
- ಐಎಲ್ಐ 17ರಷ್ಟು
- SARI 3ರಷ್ಟು
- ಸಂಪರ್ಕ ಪತ್ತೆ ಸಾಧ್ಯವಾಗದಿರುವುದು 50ರಷ್ಟು
- ಯಾದಗಿರಿ, ಉಡುಪಿ, ಕಲಬುರಗಿ, ಮಂಡ್ಯ, ರಾಯಚೂರು, ಚಿಕ್ಕಬಳ್ಳಾಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ಅನ್ಯ ರಾಜ್ಯ ಪ್ರವಾಸದಿಂದ ಸೋಂಕು ಕಾಣಿಸಿಕೊಂಡಿದೆ
- ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಧಾರವಾಡ, ಕೋಲಾರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಐಎಲ್ಐ ಮತ್ತು SARI ಕೇಸ್ಗಳು ಹೆಚ್ಚು ಕಂಡು ಬಂದಿರುವ ಅಂಶ ವರದಿಯಿಂದ ಬಹಿರಂಗಗೊಂಡಿದೆ.