ಕರ್ನಾಟಕ

karnataka

ETV Bharat / state

ಮಹಾದಾಯಿ ಹೋರಾಟಗಾರರಿಗೆ ಸಮನ್ಸ್ : ಕೋರ್ಟ್‌‌ಗೆ ಹಾಜರಾಗದಿರಲು ರೈತರ ನಿರ್ಧಾರ

ಸರ್ಕಾರ ಎಲ್ಲ ಕೇಸ್ ವಾಪಸ್ ಪಡೆಯುವುದಾಗಿ ಹೇಳಿತ್ತು. ಆದರೆ 56 ಕೇಸ್‌ಗಳ ಪೈಕಿ 51ಅನ್ನು ಮಾತ್ರ ವಾಪಸ್ ಪಡೆದಿತ್ತು. ಉಳಿದವು ಬಾಕಿ ಇವೆ. ಉಳಿದ ಐದು ಕೇಸುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಅವುಗಳಿಗೆ ಸಂಬಂಧಿಸಿದಂತೆ ಈಗ ಹೋರಾಟಗಾರರಿಗೆ ಸಮನ್ಸ್ ಬಂದಿವೆ.

ಮಹದಾಯಿ ಹೋರಾಟಗಾರರಿಗೆ ಕೋರ್ಟ್ ಸಮನ್ಸ್
ಮಹದಾಯಿ ಹೋರಾಟಗಾರರಿಗೆ ಕೋರ್ಟ್ ಸಮನ್ಸ್

By

Published : Dec 7, 2021, 5:50 PM IST

ಧಾರವಾಡ:ಮಹಾದಾಯಿ ಹೋರಾಟಗಾರರಿಗೆ ಕೋರ್ಟ್ ಸಮನ್ಸ್ ನೀಡಿದ್ದು, ನ್ಯಾಯಾಲಯಕ್ಕೆ ಹಾಜರಾಗದಿರಲು ಹೋರಾಟಗಾರರು ನಿರ್ಣಯ ಮಾಡಿದ್ದಾರೆ. ಮಹಾದಾಯಿ‌ ಹೋರಾಟಗಾರರಿಗೆ ನವಲಗುಂದ ಕೋರ್ಟ್​ ಇಂದು ಹಾಜರಾಗುವಂತೆ ಸಮನ್ಸ್ ನೀಡಿತ್ತು.

ಮಹಾದಾಯಿ ಹೋರಾಟಗಾರರಿಗೆ ಕೋರ್ಟ್ ಸಮನ್ಸ್

ಈ‌ ಕುರಿತು ಮಹಾದಾಯಿ ಹೋರಾಟಗಾರ ಲೋಕನಾಥ ಹೆಬಸೂರ ಪ್ರತಿಕ್ರಿಯಿಸಿದ್ದು, ಸರ್ಕಾರ ಎಲ್ಲ ಕೇಸ್ ವಾಪಸ್ ಪಡೆಯುವುದಾಗಿ ಹೇಳಿತ್ತು. ಆದರೆ 56 ಕೇಸ್‌ಗಳ ಪೈಕಿ 51ಅನ್ನು ಮಾತ್ರವೇ ವಾಪಸ್ ಪಡೆದಿತ್ತು. ಉಳಿದವು ಬಾಕಿ​ ಇವೆ. ಉಳಿದ ಐದು ಕೇಸುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಅವುಗಳಿಗೆ ಸಂಬಂಧಿಸಿ ಈಗ ಸಮನ್ಸ್ ಬಂದಿವೆ ಎಂದು ತಿಳಿಸಿದ್ದಾರೆ.

ಇದೇ ಡಿಸೆಂಬರ್ 13ಕ್ಕೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಇದೆ. ಅಷ್ಟರೊಳಗೆ ಸರ್ಕಾರ ಕ್ಯಾಬಿನೆಟ್‌ನಲ್ಲಿ ಈ ಕುರಿತು ಚರ್ಚೆ ಮಾಡಬೇಕು. ಕ್ಯಾಬಿನೆಟ್‌ನಲ್ಲಿ ಕೇಸ್ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ : ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡದ್ದಕ್ಕೆ ಕಣ್ಣೀರು ಹಾಕಿದ ಬೆಳಗಾವಿ ರೈತ!

ABOUT THE AUTHOR

...view details