ಧಾರವಾಡ: ನೀರಾವರಿ ಯೋಜನೆಗೆ ಭೂಸ್ವಾಧಿನ ಪಡಿಸಿಕೊಂಡು ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯದ ಆದೇಶದ ಮೇರೆಗೆ ನೀರಾವರಿ ಇಲಾಖೆ ಕಚೇರಿಯನ್ನು ಜಪ್ತಿ ಮಾಡಲಾಗಿದೆ.
ಭೂಸ್ವಾಧಿನ ಪರಿಹಾರ ನೀಡದ ನೀರಾವರಿ ಇಲಾಖೆ: ಕಚೇರಿ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ - ನೀರಾವರಿ ಇಲಾಖೆ ಕಚೇರಿ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ
ಭೂಸ್ವಾಧಿನ ಪಡಿಸಿಕೊಂಡು ಪರಿಹಾರ ನೀಡದ ಹಿನ್ನೆಲೆ ನೀರಾವರಿ ಇಲಾಖೆ ಕಚೇರಿಯ ಕಂಪ್ಯೂಟರ್, ಕುರ್ಚಿ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಯಿತು.

ನೀರಾವರಿ ಇಲಾಖೆ ಕಚೇರಿ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ
ನೀರಾವರಿ ಇಲಾಖೆ ಕಚೇರಿ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಹಳ್ಳ ಯೋಜನೆಯಲ್ಲಿ ಪುನರ್ವಸತಿಗಾಗಿ ಭೂಸ್ವಾಧಿನ ಪಡಿಸಿಕೊಳ್ಳಲಾಗಿತ್ತು. ಯಲಬುರ್ಗಾ ತಾಲೂಕಿನ ಮುತ್ನಾಳ, ಶಿರೂರು ಗ್ರಾಮದ ಒಟ್ಟು ಐದು ಜನ ರೈತರಿಗೆ 1.8 ಕೋಟಿ ರೂ. ಪರಿಹಾರ ನೀಡುವಂತೆ ಯಲಬುರ್ಗಾ ಸಿವಿಲ್ ಕೋರ್ಟ್ ಆದೇಶ ನೀಡಿತ್ತು.
ಈ ಹಿನ್ನೆಲೆ ನ್ಯಾಯಾಲಯ ಸಿಬ್ಬಂದಿ ನೀರಾವರಿ ಇಲಾಖೆ ಕಚೇರಿಯ ಕಂಪ್ಯೂಟರ್, ಕುರ್ಚಿ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.