ಹುಬ್ಬಳ್ಳಿ :ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ನಗರದ ಐದನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರು ಪಡಿಸಲಾಯಿತು.
ಆರೋಪಿಗಳ ಪರ ಬೆಂಗಳೂರಿನ ವಕೀಲ ಬಸವರಾಜ ಹಾಗೂ ಸರ್ಕಾರದ ಪರ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಕೆ.ಎನ್. ಗಂಗಾಧರ ಅವರು, ಏಪ್ರಿಲ್ 15ಕ್ಕೆ ವಿಚಾರಣೆ ಮುಂದೂಡಿದರು.