ಹುಬ್ಬಳ್ಳಿ :ನಗರದ ಅಪ್ಸರಾ ಚಿತ್ರಮಂದಿರದ ಎದುರು ಕಳೆದ 13 ವರ್ಷಗಳ ಹಿಂದೆ ನಡೆದ ಪಲ್ಯ ಅಲಿಯಾಸ್ ಪಾಲಾಕ್ಷ ವಲ್ಲೂರು ಕೊಲೆ ಪ್ರಕರಣದಲ್ಲಿ ನ್ಯಾಯಾಲಯ 10 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ದೋಷಿ ಎಂದು ಬಿಜವಾಡ ಸಹೋದರರು ಸೇರಿ ಹತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಇದೀಗ ಈ ಎಲ್ಲರೂ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಹನ್ನೆರಡು ವರ್ಷಗಳ ಹಿಂದೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದ ಬಳಿ ಕೊಲೆ ನಡೆದಿತ್ತು. ಇಂದಿರಾ ನಗರದ ರೌಡಿ ಪಲ್ಯ ಅಲಿಯಾಸ್ ಪಾಲಾಕ್ಷ ವಲ್ಲೂರು(30) ಎಂಬಾತನ ಹತ್ಯೆಯಾಗಿತ್ತು. ಹಾಡ ಹಗಲೇ ಸಿನೀಮಿಯಾ ರೀತಿಯಲ್ಲಿ ಟಾಕೀಸ್ ಬಳಿ ಬರ್ಬರ ಹತ್ಯೆ ಮಾಡಲಾಗಿತ್ತು.
10 ಜನರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸುದೀರ್ಘ ವಿಚಾರಣೆ ನಂತರ ಪ್ರಕರಣದ 10 ಜನ ಆರೋಪಿಗಳ ಪ್ರಕರಣ ಹುಬ್ಬಳ್ಳಿ 1ನೇ ಹೆಚ್ಚುವರಿ ಸಷೆನ್ಸ್ ಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಅಪ್ಸರಾ ಚಿತ್ರಮಂದಿರದಲ್ಲಿ ರಕ್ತ ಚರಿತ್ರಂ ಸಿನಿಮಾ ವೀಕ್ಷಿಸಿ ಹೊರ ಬರುತ್ತಿದ್ದ ಪಾಲಾಕ್ಷನ ಮೇಲೆ ದುಷ್ಕರ್ಮಿಗಳ ಗುಂಪು ಏಕಾಏಕಿ ದಾಳಿ ಮಾಡಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಗುಂಪು, ಪಾಲಾಕ್ಷ ಅವರ ಹೊಟ್ಟೆಗೆ ಚುಚ್ಚಿದ್ದ ತಲ್ವಾರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿತ್ತು.
ಕೊಲೆಗೆ ಸಂಬಂಧಿಸಿ ರಜಿನಿ ಬಿಜವಾಡ, ಶಂಕ್ರಪ್ಪ ಬಿಜವಾಡ, ದುರ್ಗಪ್ಪ ಬಿಜವಾಡ, ಶಶಿಕಾಂತ ಬಿಜವಾಡ ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪರ ಹಿರಿಯ ವಕೀಲ ವಿ.ಜಿ. ಪಾಟೀಲ ಮತ್ತು ರಾಮಚಂದ್ರ ಮಟ್ಟಿ ಅವರು ವಾದ ಮಂಡಸಿದ್ದರು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನಿರ್ದೋಷಿಯೆಂದು ಕೋರ್ಟ್ ತೀರ್ಪು ನೀಡಿದೆ.
ಪತ್ನಿ ಕೊಂದು ಪತಿ ಆತ್ಮಹತ್ಯೆ:ಪತಿಯೊಬ್ಬ ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ಪತ್ನಿಯ ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರವಾರ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿಯ ಉಪ್ಪರವಾಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಉಷಾ ಖೋತ (29) ಎಂದು ಗುರುತಿಸಲಾಗಿದ್ದು, ಧರೆಪ್ಪ ಖೋತ ಕೊಲೆ ಆರೋಪಿ. ಮೃತ ಉಷಾ ಕೊಠಡಿಯಲ್ಲಿ ಮಲಗಿದ್ದ ವೇಳೆ ಪತಿ ಧರೆಪ್ಪ ಚಾಕುವಿನಿಂದ ಕತ್ತಿಗೆ ಇರಿದು ಕೊಲೆ ಮಾಡಿದ್ದಾನೆ. ನಂತರ ತಾನು ಅದೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕುಡಿತದ ನಿತ್ಯ ಜಗಳ : ಧರೆಪ್ಪ ಹಾಗೂ ಉಷಾ ಮದುವೆಯಾಗಿ 11 ವರ್ಷ ಕಳೆದಿದ್ದವು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಕುಡಿತದ ಚಟಕ್ಕೆ ದಾಸನಾಗಿದ್ದ ಇದರಿಂದ ಬೇಸತ್ತ ಉಷಾ ಕುಡಿತ ನಿಲ್ಲಿಸುವಂತೆ ಸಾಕಷ್ಟು ಬಾರಿ ಒತ್ತಾಯಿಸಿದ್ದಾರೆ. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆಯು ನಡೆಯುತ್ತಿತ್ತು. ಬುಧವಾರ ಧರೆಪ್ಪ ಕುಡಿದು ಮನೆಗೆ ಬಂದಿದ್ದ. ಉಷಾ ಗಂಡನನ್ನು ಪ್ರಶ್ನಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ 8 ವರ್ಷದ ಮಗಳ ಮುಂದೆಯೇ ಇಬ್ಬರೂ ವಾಗ್ವಾದ ನಡೆಸಿದ್ದಾರೆ. ಬಳಿಕ ಉಷಾ ತನ್ನ ಮಗಳನ್ನು ಕರೆದುಕೊಂಡು ಹೋಗಿ ಕೊಠಡಿಯಲ್ಲಿ ಮಲಗಿದ್ದಾರೆ. ಕುಡಿತದ ಅಮಲಿನಲ್ಲಿದ್ದ ಧರೆಪ್ಪ ಕೊಠಡಿಯಲ್ಲಿ ಮಲಗಿದ್ದ ಉಷಾಳ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿ:Belagavi Crime: ಕುಡಿತದಿಂದ ಕೌಟುಂಬಿಕ ಕಲಹ.. ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ